ಫೆ.8ಕ್ಕೆ ಒಂದು ಸರಳ ಪ್ರೇಮಕಥೆ ಬಿಡುಗಡೆ

25Manju8-Web
ಬೆಳಗಾವಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ನಟ ವಿನಯ ರಾಜಕುಮಾರ್ ಮಾತನಾಡಿದರು. ನಿರ್ದೇಶಕ ಸಿಂಪಲ್ ಸುನಿ ಇತರರಿದ್ದರು.
Published on

ಬೆಳಗಾವಿ: ಅಪರೂಪದ ವಿಶಿಷ್ಟ ಪ್ರೇಮಕಥೆ ಒಳಗೊಂಡಿರುವ ‘ಒಂದು ಸರಳ ಪ್ರೇಮಕಥೆ’ ಚಿತ್ರ ಫೆ.8ರಂದು ಬಿಡುಗಡೆಗೆ ಸಿದ್ಧವಾಗಿದೆ ಎಂದು ನಟ ವಿನಯ ರಾಜಕುಮಾರ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಒಂದು ಸರಳ ಪ್ರೇಮಕಥೆ ಚಿತ್ರದ ಪ್ರಚಾರ ಕಾರ್ಯ ನಡೆಸುತ್ತಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಚಿತ್ರದ ನಾಯಕಿ ಸ್ವಾತಿಷ್ಠ ಕೃಷ್ಣನ್ ಅವರು ಅನುರಾಗ ಎಂಬ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಮಲಹಾಸನ್ ನಟನೆಯ ವಿಕ್ರಮ್ ಸೇರಿದಂತೆ ಒಂದಷ್ಟು ತಮಿಳು ಸಿನಿಮಾದಲ್ಲಿ ನಟಿಸಿರುವ ಸ್ವಾತಿಷ್ಠಗೆ ಒಂದು ಸರಳ ಪ್ರೇಮಕಥೆ ಚೊಚ್ಚಲ ಕನ್ನಡ ಸಿನಿಮಾವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net