ಫೆ.3ರಂದು ಎಡತೊರೆ ಶ್ರೀಗಳಿಗೆ ಗುರುವಂದನೆ

ಎಡತೊರೆ ಶ್ರೀಗಳು
Published on

ಸಾಗರ: ಕೆ.ಆರ್.ನಗರ ತಾಲೂಕಿನ ಎಡತೊರೆ ಶ್ರೀ ಶಂಕರ ಭಾರತಿ ಸ್ವಾಮೀಜಿಗಳು ಫೆ.3ರಂದು ತಮ್ಮ ವಿಜಯಯಾತ್ರೆಯನ್ನು ಸಾಗರದಲ್ಲಿ ಸಮಾಪ್ತಿಗೊಳಿಸಲಿದ್ದು ಸಂಜೆ ೫.೩೦ಕ್ಕೆ ಶೃಂಗೇರಿ ಶಂಕರಮಠದಲ್ಲಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್ ಹೇಳಿದರು.
ನೇಪಾಳ ಮತ್ತು ಉತ್ತರ ಭಾರತದಲ್ಲಿ ತಮ್ಮ ಧಾರ್ಮಿಕ ಪ್ರವಾಸವನ್ನು ಮುಗಿಸಿಕೊಂಡು ಶ್ರೀಗಳು ಸಾಗರಕ್ಕೆ ಆಗಮಿಸುತ್ತಿz್ದÁರೆ. ಮೈಸೂರಿನ ಯೋಗಿರಾಜ್ ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ನಿರ್ಮಿಸಿಕೊಟ್ಟಿದ್ದರೆ, ಎಡತೊರೆ ಶ್ರೀಗಳು ಅಯೋಧ್ಯೆ ರಾಮಮಂದಿರಕ್ಕೆ ಉತ್ಸವ ಮೂರ್ತಿಯನ್ನು ನೀಡಿz್ದÁರೆ. ಬಾಲರಾಮನ ಪ್ರಾಣಪ್ರತಿಷ್ಠೆ ಸಂದರ್ಭದಲ್ಲಿ 15 ದಿನ ಅಯೋಧ್ಯೆಯಲ್ಲಿ ಶ್ರೀಗಳು ವಾಸ್ತವ್ಯ ಹೂಡಿದ್ದರು. ಅನೇಕ ಕ್ಷೇತ್ರಗಳಿಗೆ ಭೇಟಿ ನೀಡಿ ಧಾರ್ಮಿಕ ಪ್ರವಚನ ನೀಡುತ್ತಾ, ಶಂಕರ ತತ್ವವನ್ನು ಎ¯್ಲÉಡೆ ಪಸರಿಸುತ್ತಾ ಬಂದಿರುವ ಎಡತೊರೆ ಶ್ರೀಗಳು ಸಾಗರದಲ್ಲಿ ತಮ್ಮ ವಿಜಯಯಾತ್ರೆಯನ್ನು ಸಮಾಪ್ತಿಗೊಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀಮಠದಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.ಸ.ನಂಜುAಡಸ್ವಾಮಿ ಮಾತನಾಡಿ, ಎಡತೊರೆ ಶ್ರೀಗಳು ಸೌಂದರ್ಯ ಲಹರಿಯನ್ನು ಜÁತಿಮತ ಬೇಧಭಾವ ನೋಡದೆ ಎಲ್ಲರಿಗೂ ತಲುಪಿಸಲು ತಮ್ಮದೇ ರೀತಿಯಲ್ಲಿ ಪ್ರಯತ್ನ ನಡೆಸಿದವರು ಎಂದರು.
ಕೆ.ಜಿ.ಸುರೇಶ್, ಸರೋಜಮ್ಮ, ಪ್ರಭಾ ವೆಂಕಟೇಶ್, ನಟರಾಜ್, ಸವಿತಾ ಶ್ರೀಕಾಂತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net