ಕಾಂಗ್ರೆಸ್ ಮೇಲೆ ರೆಡ್ಡಿ ಪ್ರವೇಶ ಪರಿಣಾಮ ಬೀರಲ್ಲ

JN Ganesh MLA Kampli
ಕಂಪ್ಲಿ ಶಾಸಕ ಜೆ.ಎನ್.ಗಣೇಶ್
Published on

ಕುರುಗೋಡು: ಶಾಸಕ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿ ಪ್ರವೇಶದಿಂದ ಸಂಡೂರು ವಿಧಾನಸಭೆ ಉಪ ಚುನಾವಣೆ ಮತ್ತು ಪಕ್ಷದ ಮೇಲೆ ಯಾವುದೇ ಪರಿಣಾಮ ಬಿರುವುದಿಲ್ಲ ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿಎಂ ಸಿದ್ದರಾಮಯ್ಯ ಜನಪರ ಯೋಜನೆಗಳನ್ನು ಜಾರಿಗೊಳಿಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಐದು ಗ್ಯಾರಂಟಿಗಳನ್ನು ಈಡೇರಿಸುವಲ್ಲಿ ಸಫಲರಾಗಿದ್ದು, ಜನರೇ ಕೈಹಿಡಿಯಲಿದ್ದಾರೆ. ಸಿಎಂ ಐದು ವರ್ಷ ಕಾರ್ಯನಿರ್ವಹಿಸಲಿದ್ದಾರೆ. ಯಾವುದೇ ಕಾರಣಕ್ಕೆ ರಾಜೀನಾಮೆ ನೀಡಲ್ಲ. ಬಳ್ಳಾರಿಗೆ ಯಾವುದೇ ನಾಯಕರು ಬಂದರೂ ಕಾಂಗ್ರೆಸ್ ಮೇಲೆ ಪರಿಣಾಮ ಬಿರುವುದಿಲ್ಲ ಎಂದರು.

ಕೆಕೆಆರ್‌ಡಿಬಿ ಯೋಜನೆಯಡಿ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 80 ಕೋಟಿ ರೂ., ಗಾಂಧಿ ತತ್ವ ಆಧಾರಿತ ನೂತನ ವಸತಿ ಶಾಲೆಗೆ 44 ಕೋಟಿ ರೂ., ಮುರಾರ್ಜಿ, ಎಸ್ಸಿ, ಎಸ್ಟಿ, ಒಬಿಸಿ ಸೇರಿ ವಿವಿಧ ಸಮುದಾಯಗಳ ಹಾಸ್ಟೆಲ್ ನಿರ್ಮಾಣಕ್ಕೆ 100 ಕೋಟಿ ರೂ. ಮಂಜೂರಾಗುವ ಸಾಧ್ಯತೆ ಇದೆ ಎಂದ ಅವರು, ಓರ್ವಾಯಿ ಗ್ರಾಮದಲ್ಲಿ ಮುರಾರ್ಜಿ ಶಾಲೆ ಆರಂಭಿಸಲು ಸರ್ಕಾರಿ ಜಾಗ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ನಾಗವೇಣಿ ದೊಡ್ಡಬಸವ, ಪ್ರಮುಖರಾದ ಪಂಪಣ್ಣ, ಎನ್.ಕರೆಪ್ಪ, ಗಂಡಿ ರಾಜಾಸಾಬ್, ದೊಡ್ಡನಗೌಡ, ಶಾಂತನಗೌಡ, ಜಿ.ಬಸವನಗೌಡ, ಎನ್.ಜಡೆಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net