ಅಂಕೋಲಾದಲ್ಲಿ ಚೈತ್ರಗಾನ 11ರಂದು

Published on

ಅಂಕೋಲಾ: ಕಲಾಭಾರತಿ ಟ್ರಸ್ಟ್ ಆಶ್ರಯದಲ್ಲಿ ಏ. 11 ರಂದು ಸಂಜೆ 4.30ರಿಂದ ಇಲ್ಲಿನ ಸ್ವಾತಂತ್ರ್ಯ ಭವನದಲ್ಲಿ ಚೈತ್ರಗಾನ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಕಲಾಭಾರತಿ ಟ್ರಸ್ಟ್ ಅಧ್ಯಕ್ಷ ಪ್ರಶಾಂತ ಶೆಟ್ಟಿ ಹೇಳಿದರು.

ಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಕಾರ್ಯಕ್ರಮ ಉದ್ಘಾಟಿಸುವರು. ಸರಿಗಮಪ ಸಿಂಗರ್ಸ್ ಸುಜಾತಾ ಕಲ್ಮೇಶ, ಕಿರಣ ಪಾಟೀಲ, ಎದೆತುಂಬಿ ಹಾಡುವೆನು ಸಿಂಗರ್ಸ್ ದರ್ಶಿನಿ ಶೆಟ್ಟಿ, ವರ್ಷಿಣಿ ಶೆಟ್ಟಿ, ಕಾಮಿಡಿ ಕಿಲಾಡಿ ರಾಜು ಸಂಪೇಸರ, ನಾನೇ ರಾಜಕುಮಾರ ಸೇರಿದಂತೆ ಗಾಯಕ ತಂಡದವರಿಂದ ಸಂಗೀತ ರಸಸಂಜೆ ನಡೆಯಲಿದೆ. ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ತಂಡದಿಂದ ಗಾನ ವೈಭವ, ಕಾರ್ತಿಕ ಚಿಟ್ಟಾಣಿ, ನಿಹಾರಿಕಾ ಭಟ್ ಅವರಿಂದ ನೃತ್ಯ ವೈಭವ ನಡೆಯಲಿದೆ. ಇದೇ ವೇಳೆ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ನಿವೃತ್ತ ಉಪನ್ಯಾಸಕ ಅನಂತ ವಿ. ಶೆಟ್ಟಿ, ಪತಂಜಲಿ ಯೋಗ ಸಮಿತಿಯ ವಿನಾಯಕ ಗುಡಿಗಾರ, ಶಿಕ್ಷಕ ವಿ.ಕೆ. ನಾಯರ್, ನಿವೃತ್ತ ಶಿಕ್ಷಕ ಎಂ.ಎಂ. ಕರ್ಕಿಕರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net