

ಮಸ್ಕಿ: ಮಸ್ಕಿ ಜಲಾಶಯ ಭರ್ತಿಯಾಗಿದ್ದು, ಆ.10 ರಂದು ಯೋಜನೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ಕೃಷಿ ಚಟುವಟಿಕೆಗಾಗಿ ಎಡ ಮತ್ತು ಬಲ ದಂಡೆಗೆ ನೀರು ಬಿಡಲಾಗುವುದು ಎಂದು ನೀರಾವರಿ ಸಲಹಾ ಸಮಿತಿಯ ಅಧ್ಯಕ್ಷ ಹಾಗೂ ಸಹಾಯಕ ಆಯುಕ್ತ ರಾಹುಲ್ ಸಂಕನೂರು ತಿಳಿಸಿದರು.
ತಾಲೂಕಿನ ಮಾರಲದಿನ್ನಿಯ ಬಳಿಯ ಮಸ್ಕಿ ಜಲಾಶಯದ ಬಳಿ ಗುರುವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಮಳೆಗಾಲ ಆರಂಭದಲ್ಲೇ ಜಲಾಶಯ ತುಂಬಿದೆ. ನೀರಿನ ಲಭ್ಯತೆ ಆಧರಿಸಿ ಮುಂಗಾರು ಕೃಷಿಗೆ ನೀರು ಹರಿಸಲಾಗುವುದು ಎಂದರು. ಶಾಸಕ ಬಸನಗೌಡ ತುರ್ವಿಹಾಳ ಮಾತನಾಡಿ, ರೈತರು ನೀರನ್ನು ಪೋಲು ಮಾಡದೆ ಬಳಸಬೇಕು ಎಂದರು.