ಆ.20 ರಂದು ‘‘ದಾಸನಾಗು ವಿಶೇಷನಾಗು’’ ಉಪನ್ಯಾಸ ಕಾರ್ಯಕ್ರಮ

raichur
raichur
Published on

ರಾಯಚೂರು ನಗರದ ಕರ್ನಾಟಕ ಸಂಘದಲ್ಲಿ ಶೃತಿ ಸಾಹಿತ್ಯ ಮೇಳದಿಂದ ಆ.21 ರಂದು ಸಂಜೆ 5.30ಕ್ಕೆ ಶ್ರೀ ಕನಕದಾಸರ ಸಾರಸ್ವತ್ಯ ದರ್ಶನ ಕುರಿತಾದ ‘‘ದಾಸನಾಗು ವಿಶೇಷನಾಗು’’ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆಂದು ಶೃತಿ ಸಾಹಿತ್ಯ ಮೇಳದ ಅಧ್ಯಕ್ಷ ಮುರುಳಿಧರ ಕುಲ್ಕರ್ಣಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಶ್ರೀಸುಸ್ವರಂ ನಾಗರಾಜಾಚಾರ್ಯ ಉಪನ್ಯಾಸ ನೀಡಲಿದ್ದಾರೆ. ಶ್ರೀರಾಘವೇಂದ್ರ ಹಾಗೂ ಝಾನ್ಸಿರಾಣಿ ನಾರಾಯಣರಾವ್ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.

ಉದ್ಘಾಟನೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಕೆ.ಶಾಂತಪ್ಪ ನೇರವೆರಿಸಲಿದ್ದಾರೆ. ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ.ಜಯಲಕ್ಷ್ಮೀ ಮಂಗಳಮೂರ್ತಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡರಾದ ರವೀಂದ್ರ ಜಲ್ದಾರ, ಕಡಗೋಳ ಆಂಜಿನೇಯ್ಯ, ವಿಜಯಕುಮಾರ ಸಜ್ಜನ, ಹನುಮಂತರಾವ್ ಕಲ್ಯಾಣಕರ್, ಜಿಲ್ಲಾ ಕುರುಬ ಸಮಾಜ ಅಧ್ಯಕ್ಷ ಕೆ.ಬಸವಂತಪ್ಪ, ಜಿಲ್ಲಾ ಜನಪದ ಮಹಿಳಾ ಸಾಹಿತ್ಯ ಪರಿಷತ್ ಅಧ್ಯಕ್ಷೆ ದಾನಮ್ಮ ಸುಭಾಷಚಂದ್ರ, ಶರಣಪ್ಪ ಗೋನಾಳ ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ ರಮೇಶ ಕುಲ್ಕರ್ಣಿ, ಜೆ.ಎಂ. ವೀರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net