

ಉಳ್ಳಾಗಡ್ಡಿ-ಖಾನಾಪುರ: ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಲು ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಹ್ಯಾಸ್ ಟ್ಯಾಲೆಂಟ್ ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ಅಂತಿಮ ಹಂತದ ಸ್ಪರ್ಧೆ ಅ.7ರಂದು ಚಿಕ್ಕೋಡಿ ಪಟ್ಟಣದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಸಮೀಪದ ಯಮಕನಮರಡಿ ಗ್ರಾಮದ ಬಿ.ಬಿ.ಹಂಜಿ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಯಮಕನಮರಡಿ ಹ್ಯಾಸ್ ಟ್ಯಾಲೆಂಟ್ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಚಿಕ್ಕೋಡಿ ಪಟ್ಟಣದಲ್ಲಿ ಅ.8ರಂದು ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಜೊಲ್ಲೆ ಗ್ರೂಪ್ ಮೂಲಕ ಸ್ವಸಹಾಯ ಸಂಘಗಳನ್ನು ಉತ್ತೇಜಿಸಿ ಸ್ವ ಉದ್ಯೋಗ ಕೈಗೊಳ್ಳಲು ತರಬೇತಿ ನೀಡಲಾಗುವುದು ಎಂದರು.
ಹತ್ತರಗಿ ಕಾರಿಮಠದ ಗುರುಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಯುವ ಪ್ರತಿಭಾ ಪ್ರದರ್ಶನಕ್ಕಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವ ಗ್ರೂಪ್ ಸೂಕ್ತ ವೇದಿಕೆ ಕಲ್ಪಿಸಿ ಕಲೆಗೆ ಬೆಲೆ ಕೊಡುತ್ತಿರುವುದು ಶ್ಲಾಘನೀಯ ಎಂದರು.
ಬಿಜೆಪಿ ಮುಖಂಡ ರವೀಂದ್ರ ಹಂಜಿ ಮಾತನಾಡಿ, ಕರೊನಾ ಸೇರಿ ಸಂಕಷ್ಟದ ಸಮಯದಲ್ಲಿ ಜೊಲ್ಲೆ ಗ್ರೂಪ್ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಸ್ತುತ್ಯಾರ್ಹ ಎಂದರು. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಂಘದ ನಿರ್ದೇಶಕ ಅಶೋಕ ಚಂದಪ್ಪಗೊಳ ಮಾತನಾಡಿದರು. ಹತ್ತರಗಿ ಹರಿ ಮಂದಿರದ ಡಾ.ಆನಂದಗೋಸಾವಿ ಮಹಾರಾಜರು, ಜಾರಕಿಹೊಳಿ ಕೃಪಾನಂದ ಸ್ವಾಮೀಜಿ, ಚಿಕ್ಕೋಡಿ ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಬಸವರಾಜ ಹುಂದ್ರಿ, ಹಣಮಂತ ಇನಾಮದಾರ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ಶ್ರೀಶೈಲ ಯಮಕನಮರಡಿ, ಅಪ್ಪಯ್ಯ
ಜಾಜರಿ, ಶಂಕರರಾವ ಬಾಂದುರ್ಗೆ, ಸಿದ್ದಲಿಂಗ ಸಿದ್ದಗೌಡರ, ಮಹಾವೀರ ನಾಶಿಪುಡಿ, ಶಿವಾನಂದ ಪಡಗುರಿ ಇತರರಿದ್ದರು.