

ಕಲಾಸುರುಚಿ ಸಂಸ್ಥೆಯು ಕುವೆಂಪುನಗರದ ಸುರುಚಿ ರಂಗಮನೆಯಲ್ಲಿ ‘ಯಕ್ಷಗಾನ ತಾಳಮದ್ದಳೆ ಸಮರ ಸೌಗಂಧಿಕೆ’ ಕಾರ್ಯಕ್ರಮವನ್ನು ಸೆ.3ರಂದು ಸಂಜೆ 5.30ಕ್ಕೆ ಆಯೋಜಿಸಲಾಗಿದೆ.
ದಕ್ಷಿಣ ಕನ್ನಡದ ಪ್ರಸಿದ್ಧ ಕಲಾವಿದ ಜಬ್ಬಾರ್ ಸಮೋ ಸಂಪಾಜೆ ‘ಭೀಮಸೇನ’ನಾಗಿ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ ‘ಹನುಮಂತ’ನಾಗಿ, ಸುರೇಶ್ ಶೆಟ್ಟಿ ನಂದ್ರೋಳ್ಳಿ ‘ಕುಬೇರ’ನಾಗಿ ಅಭಿನಯಿಸಲಿದ್ದಾರೆ. ಹಿಮ್ಮೇಳದಲ್ಲಿ ಭವ್ಯಶ್ರೀ ಕುಳ್ಕುಂದ (ಭಾಗವತಿಕೆ), ರೋಹಿತ್ ಉಚ್ಚಿಲ (ಮದ್ದಳೆ), ಸವಿನಯ ನೆಲ್ಲಿತೀರ್ಥ (ಚಂಡೆ) ಸಹಕಾರ ನೀಡಲಿದ್ದಾರೆ.
ಇಲ್ಲಿ ಮೂರು ಪಾತ್ರಗಳು ಮಾತ್ರ ಮುಮ್ಮೇಳದಲ್ಲಿ ಕಾಣಿಸಿಕೊಳ್ಳುತ್ತವೆ. ಭೀಮ ಸ್ವಗತದಲ್ಲಿ ದ್ರೌಪದಿಯ ಇಚ್ಛೆಯನ್ನು ತಿಳಿಸಿ ಪುಷ್ಪಾನ್ವೇಷಣೆಗೆ ತೆರಳುತ್ತಾನೆ. ನಂತರ ‘ಹನುಮಂತ’ನ ಭೇಟಿ, ಅಲ್ಲಿಂದ ‘ಕುಬೇರನೊಂದಿಗಿನ ಯುದ್ಧ’ ಈ ಪ್ರಸಂಗದಲ್ಲಿ ಮೌಖಿಕವಾಗಿ ವ್ಯಕ್ತಗೊಳ್ಳಲಿವೆ. ಇದಕ್ಕೆ ಕಂಚಿನ ಕಂಠದ ಮಹಿಳಾ ಹಾಡುಗಾರಿಕೆಯೂ ರಂಗು ನೀಡಲಿದೆ.