28ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

19 KNK 01
ಮುದಿಯಪ್ಪ ನಾಯಕ ಮಲ್ಲಿಗೆವಾಡ
Published on

ಕನಕಗಿರಿ: ತಾಲೂಕು ಆಡಳಿತ ಹಾಗೂ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ತಾಲೂಕು ಘಟಕದಿಂದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅ.28ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ತಾಲೂಕು ಘಟಕದ ಗೌರವ ಅಧ್ಯಕ್ಷ ಮುದಿಯಪ್ಪ ನಾಯಕ ಮಲ್ಲಿಗೆವಾಡ ಹೇಳಿದರು.

ಜಯಂತಿ ಅಂಗವಾಗಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಹನುಮಪ್ಪ ದೇವಸ್ಥಾನದಿಂದ ರಾಜಬೀದಿ ಮಾರ್ಗವಾಗಿ ವಾಲ್ಮೀಕಿ ವೃತ್ತದವರೆಗೆ ಮೆರವಣಿಗೆ ಮಾಡಲಾಗುವುದು.

ಮೆರವಣಿಗೆಯಲ್ಲಿ ಕುಂಭ, ಕಳಶ, ಡೊಳ್ಳು, ಹಗಲು ವೇಷಗಾರರು, ಭಾಜಾ ಭಜಂತ್ರಿ ತಂಡಗಳು ಪಾಲ್ಗೊಳ್ಳಲಿವೆ ಎಂದರು. ತಾಲೂಕು ಅಧ್ಯಕ್ಷ ನಾಗರಾಜ ಇದ್ಲಾಪುರ, ಉಪಾಧ್ಯಕ್ಷರಾದ ನಿಂಗಪ್ಪ ನವಲಿ, ಹುಲಿಗೆಮ್ಮ ನಾಯಕ, ಜಾತ್ರಾ ಸಮಿತಿ ಅಧ್ಯಕ್ಷ ರಾಮನಗೌಡ ಬುನ್ನಟ್ಟಿ, ಪ್ರಮುಖರಾದ ಸಣ್ಣ ಸಿದ್ದೇಶ, ರಾಮಣ್ಣ ಆಗೋಲಿ, ರಾಮಕೃಷ್ಣ ನಾಯಕ, ಬಾರೇಶ ನಡಲಮನಿ, ಕಂಠಿರಂಗ ನಾಯಕ, ಶೇಖರಗೌಡ, ಪಂಪಾಪತಿ ತರ‌್ಲಕಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net