

ಹುಕ್ಕೇರಿ: ಜಿಲ್ಲಾದ್ಯಂತ ಆರ್ಥಿಕ ವ್ಯವಹಾರ ನಡೆಸುತ್ತಿರುವ ತಾಲೂಕಿನ ಹುಲ್ಲೋಳಿ ಅರಿಹಂತ ಸೌಹಾರ್ದ ಸಹಕಾರಿ ಸಂಘದ ಬೆಳ್ಳಿ ಮಹೋತ್ಸವ ಡಿ.26ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ನಿರ್ದೇಶಕ ಪಿ.ಆರ್.ಚೌಗಲಾ ತಿಳಿಸಿದರು.
ಗ್ರಾಮದ ಅರಿಹಂತ ಸೌಹಾರ್ದ ಸಹಕಾರಿ ಸಂಘದ ಸಭಾಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹೋತ್ಸವದ ನೆನಪಿಗಾಗಿ ಸದಸ್ಯರಿಗೆ 10ಗ್ರಾಂ ಬೆಳ್ಳಿ ನಾಣ್ಯ ಹಾಗೂ ಕ್ಯಾಶ್ ಬ್ಯಾಗ್ ವಿತರಿಸಲಾಗುವುದು ಎಂದರು.
ಅಧ್ಯಕ್ಷ ಬಿ.ಬಿ.ಚೌಗಲಾ ಮಾತನಾಡಿ, ಗ್ರಾಮದಲ್ಲಿರುವ ಅರಿಹಂತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆವರಣದಲ್ಲಿ ಬೆಳ್ಳಿ ಮಹೋತ್ಸವ ಆಯೋಜಿಸಲಾಗಿದ್ದು, ನಾಂದಣಿ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಶ್ರವಣಬೆಳಗೋಳದ ಅಭಿನವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮೀಜಿ ಸಾನ್ನಿಧ್ಯ ಹಾಗೂ ಮಾಜಿ ಸಂಸದ ರಮೇಶ ಕತ್ತಿ ಅಧ್ಯಕ್ಷತೆ ವಹಿಸುವರು ಎಂದರು.
ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಮಾತನಾಡಿ, ಬೆಳ್ಳಿ ಮಹೋತ್ಸವದಲ್ಲಿ ಸಚಿವ ಡಿ.ಸುಧಾಕರ, ಶಾಸಕ ಅಭಯ ಪಾಟೀಲ, ಶಾಸಕ ನಿಖಿಲ್ ಕತ್ತಿ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಧನ್ಯಕುಮಾರ ಗುಂಡೆ, ಸಂಜಯ ಪಾಟೀಲ, ಜಗದೀಶ ಕವಟಗಿಮಠ, ಉತ್ತಮ ಪಾಟೀಲ, ವಿನೋದ ದೊಡ್ಡಣ್ಣವರ, ಪಾರೀಸ್ ಉಗಾರೆ, ಸಹಕಾರ ಸಂಘಗಳ ಉಪನಿಬಂಧಕ ರವೀಂದ್ರ ಪಾಟೀಲ ಭಾಗಿಯಾಗಲಿದ್ದಾರೆ ಎಂದು ಹೇಳಿದರು. ಉಪಾಧ್ಯಕ್ಷ ಬಾಹುಬಲಿ ನಾಗನೂರಿ, ನಿರ್ದೇಶಕ ರವೀಂದ್ರ ಚೌಗಲಾ, ಜಯಪಾಲ ಚೌಗಲಾ, ರಾಮಣ್ಣ ಗೋಟೂರಿ, ಜಿನ್ನಪ್ಪ ಸಪ್ತಸಾಗರ, ಅಶೋಕ ಚೌಗಲಾ, ಪ್ರಕಾಶ ಚೌಗಲಾ, ಬಾಬು ಅಕ್ಕಿವಾಟೆ, ಶ್ರುತಿ ಪಾಟೀಲ, ಸುಮತಿ ಚೌಗಲಾ, ಮಾಯಪ್ಪ ಹೊಳೆಪ್ಪಗೋಳ, ಬಸವರಾಜ ಪಾಟೀಲ, ಬಾಳಪ್ಪ ಸಂಕೇಶ್ವರಿ, ಅರುಣ ಚೌಗಲಾ ಇತರರಿದ್ದರು.