26ರಂದು ಅಣ್ಣನ ನೆನಪು ನಾಟಕ ಪ್ರದರ್ಶನ

kuvempu1
Published on

ಮೈಸೂರು: ಬೆಂಗಳೂರಿನ ಪ್ರವರ ಥಿಯೇಟರ್ ರಂಗ ತಂಡದ ವತಿಯಿಂದ ಫೆ.26ರಂದು ಸಂಜೆ 4 ಮತ್ತು 7 ಗಂಟೆಗೆ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಅಣ್ಣನ ನೆನಪು’ ಸಾಕ್ಷ್ಯ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ನಿರ್ದೇಶಕ ಹನು ರಾಮಸಂಜೀವ ತಿಳಿಸಿದರು.


ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಅಣ್ಣನ ನೆನಪು ಕೃತಿಯಲ್ಲಿ ಮಹಾಕವಿ ಕುವೆಂಪು ಅವರ ಜೀವನದ ಹಲವು ಮಹತ್ವದ ಅಧ್ಯಾಯಗಳಿವೆ. ಒಂದರ್ಥದಲ್ಲಿ ಪೂರ್ಣಚಂದ್ರ ತೇಜಸ್ವಿ ಹುಟ್ಟಿದಂದಿನಿಂದ ಇಲ್ಲಿಯವರೆಗಿನ ಕುವೆಂಪು ಅವರ ಕಥೆ ಒಳಗೊಂಡಿದೆ. ಇದು ತೇಜಸ್ವಿ ಅವರ ಆತ್ಮಕತೆಯ ಹಲವು ಅಧ್ಯಾಯಗಳೂ ಆಗಿವೆ. ಹೀಗಾಗಿ ಈ ನಾಟಕ ಮಹತ್ವದ್ದಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಅಕ್ಷಯ್ ಭೋಂಸ್ಲೆ ಇನ್ನಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net