ಅ.24ಕ್ಕೆ ಗುರುಪುರ ಶ್ರೀ ಜಂಗಮ ಮಠದ ಶಿಲಾನ್ಯಾಸ : ಜೀರ್ಣೋದ್ಧಾರ ಪ್ರಯುಕ್ತ ಭಕ್ತರಿಂದ ಶ್ರಮದಾನ

New Project (35)
Published on

ಗುರುಪುರ: ಇಲ್ಲಿನ ಶ್ರೀ ನೀಲಕಂಠೇಶ್ವರ ದೇವಸ್ಥಾನ ಶ್ರೀ ಜಂಗಮ ಸಂಸ್ಥಾನ ಮಠ ಜೀರ್ಣೋದ್ಧಾರ ಪ್ರಯುಕ್ತ ಅ.24ರಂದು ಶಿಲಾನ್ಯಾಸ ನೆರವೇರಲಿದ್ದು, ಭಾನುವಾರ ಮಠದ ಆವರಣದಲ್ಲಿ ಭಕ್ತರ ಸಭೆಯಲ್ಲಿ ಶ್ರೀ ಜಂಗಮ ಸಂಸ್ಥಾನ ಮಠಾಧ್ಯಕ್ಷ ಶ್ರೀ ರುದ್ರಮುನಿ ಸ್ವಾಮೀಜಿ ಶಿಲಾನ್ಯಾಸ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸಚಿನ್ ಕುಮಾರ್ ಅಡಪ, ಸಮಿತಿ ಪದಾಧಿಕಾರಿಗಳಾದ ಸಚಿನ್ ಶೆಟ್ಟಿ ಮಠದಬೈಲು, ರವೀಂದ್ರ ಶೆಟ್ಟಿ ಬೆಳ್ಳೂರುಗುತ್ತು, ಡಾ.ರವಿರಾಜ್ ಶೆಟ್ಟಿ ಕಾರಮೊಗರುಗುತ್ತು, ಹರೀಶ್ ಚಾಮಣಿ, ರಾಜೇಶ್ ಸುವರ್ಣ ಗುರುಪುರ, ನಾಗೇಶ್ ಕೊಟ್ಟಾರಿ, ಗಣೇಶ್ ಕೊಟ್ಟಾರಿ, ವಿನಯ್ ಸುವರ್ಣ, ಗೋಕುಲ್ ಪ್ರಭು, ರಮಾನಂದ ಶೆಟ್ಟಿ, ಪುರುಷೋತ್ತಮ ಮಲ್ಲಿ, ಹೇಮಚಂದ್ರ ಚಿಲಿಂಬಿಗುಡ್ಡೆ, ಶೋಧನ್ ಮಠದಬೈಲು, ಯತೀಶ್ ಕುಲಾಲ್, ರಾಜೇಶ್ ಶೆಟ್ಟಿ ಮಠದಬೈಲು, ವಸಂತ ಸುವರ್ಣ ಗುರುಪುರ, ನಿತೀನ್ ಕುಲವೂರು ಹಾಗೂ ಊರ-ಪರವೂರ ಭಕ್ತರು ಉಪಸ್ಥಿತರಿದ್ದರು. ಮಠದ ಆರಾಧ್ಯ ದೇವರು ಬಾಲಾಲಯದಲ್ಲಿ ಪ್ರತಿಷ್ಠಾಪನೆಗೊಂಡ ಬಳಿಕ ಮಠದಲ್ಲಿ ನಿರಂತರ ಶ್ರಮದಾನ ನಡೆಯುತ್ತಿದೆ.

ಅ.24ರಂದು ಬೆಳಗ್ಗೆ 9.10ರ ವೃಶ್ಚಿಕ ಲಗ್ನ ಮುಹೂರ್ತದಲ್ಲಿ ತುಮಕೂರು ಶ್ರೀ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮತ್ತು ಸುತ್ತೂರು ಶ್ರೀ ವೀರ ಸಿಂಹಾಸನ ಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕ ಡಾ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ರುದ್ರಮುನಿ ಸ್ವಾಮೀಜಿ ಪ್ರಸ್ತಾವಿಸಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶಯ ಭಾಷಣ ಮಾಡಲಿದ್ದಾರೆ. ಸಚಿವರಾದ ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ, ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ, ಎಂಎಲ್‌ಸಿ ಮಂಜುನಾಥ ಭಂಡಾರಿ, ಚಂದ್ರಕಾಂತ ಭಟ್, ಕುಲದೀಪ ಚೌಟ, ದ.ಕ. ಮಾಜಿ ಸಂಸದರು, ಮಾಜಿ ಸಚಿವರಾದ ರಮಾನಾಥ ರೈ, ಕೃಷ್ಣ ಪಾಲೆಮಾರ್, ಬಿ.ನಾಗರಾಜ ಶೆಟ್ಟಿ, ಕುದ್ರೋಳಿ ದೇವಸ್ಥಾನ ಕೋಶಾಧಿಕಾರಿ ಪದ್ಮರಾಜ ಆರ್.ಪೂಜಾರಿ, ಸೋಮಶೇಖರ್, ಸಿ.ಎಸ್.ಪುಟ್ಟರಾಜು, ಗಂಗಾಂಬಿಕೆ ಮಲ್ಲಿಕಾರ್ಜುನ, ಬಿ.ಎಸ್.ಸಚ್ಚಿದಾನಂದ ಮೂರ್ತಿ, ಮನೋಹರ ಗಂಗಾಧರಪ್ಪ, ವಿನುತಾ ಆರ್. ಪಾಲ್ಗೊಳ್ಳಲಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net