

ಮಡಿಕೇರಿ: ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಎಂಟನೇ ದಿನವಾದ ಸೋಮವಾರ(ಅ.೨೩)ಆಯುಧಪೂಜಾ ಸಂದರ್ಭ ವೈವಿಧ್ಯಮಯ ಕಾರ್ಯಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ. ಈ ಬಾರಿ ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆಯಾಗಿರುವ ಭಾರತದ ಹೆಸರಾಂತ ಹಿನ್ನಲೆ ಗಾಯಕ ವಿಜಯಪ್ರಕಾಶ್ ಅವರಿಂದ ಗಾನವೈಭವ ಕೂಡ ಇಂದು ರಾತ್ರಿ ನಡೆಯಲಿದೆ ಎಂದು ದಸರಾ ಸಮಿತಿ ಸಂಚಾಲಕ ಎಚ್.ಟಿ.ಅನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅ.೨೩. ರಂದು ಸೋಮವಾರ ಶ್ರೀ ಕಾಮಾಕ್ಷಿ ಮಹಿಳಾ ಸಂಘದಿಂದ ಕಥಕಳಿ, ಯುವಜಾನಪದ ಬಳಗ ವತಿಯಿಂದ ಜಾನಪದ ನೃತ್ಯ, ಯುವಜನಪದ ಬಳಗದಿಂದ ನೃತ್ಯ, ಮಡಿಕೇರಿ ತಾಲೂಕು ಬಂಟರ ಸಂಘ, ಕ್ವೀನ್ಸ್ ಆಫ್ ಕೂರ್ಗ್, ಮಂಗಳೂರಿನ ತಾಂಡವಂ ಡಾನ್ಸ್ ಅಕಾಡೆಮಿಯಿಂದ ನತ್ಯರಂಗ್ ಸೋಮವಾರದ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳಾಗಿದೆ.
ಅ.೨೪ರಂದು ರಾತ್ರಿಯಿಡೀ ಸಂಗೀತ, ನೃತ್ಯದ ರಂಗು: ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಒಂಭತ್ತನೇ ದಿನವಾದ ಮಂಗಳವಾರ ವಿಜಯದಶಮಿ ಸಂದರ್ಭ ವೈವಿಧ್ಯಮಯ ಕಾರ್ಯಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ.
ಅ.೨೪ ರಂದು ಮಂಗಳವಾರ ವಿಜಯದಶಮಿ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಮುದ್ರ ಸ್ಕೂಲ್ ಆಫ್ ಡಾನ್ಸ್, ತಂಡದಿಂದ ನೃತ್ಯವೈವಿಧ್ಯ, ಉಡುಪಿಯ ಭಾರ್ಗವಿ ಡಾನ್ಸ್ ಟೀಮ್‌ನಿಂದ ಗ್ರಾವಿಟಿ ಡಾನ್ಸ್, ಚಕ್ಕೇರ ಪಂಚಮ್ ತ್ಯಾಗರಾಜ್ ಮತ್ತು ತಂಡದಿಂದ ಗಾನಸುಧೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ದಸರಾ ಸಾಂಸ್ಕೃತಿಕ ಸಮಿತಿಯಿಂದ ಆಯೋಜಿಸಲಾಗಿದೆ. ರಾತ್ರಿ ೧೦ ಗಂಟೆಯಿಂದ ಬೆಳಗ್ಗಿನ ಜಾವ ೫ ಗಂಟೆಯವರೆಗೆ ರಾಜ್ಯದ ಹೆಸರಾಂತ ಗಾಯಕ, ಗಾಯಕಿಯರಿಂದ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಮಡಿಕೇರಿ ನಗರ ದಸರಾ ಸಮಿತಿಯಿಂದ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.