22 ರಂದು ಅಯ್ಯಪ್ಪಸ್ವಾಮಿ ಮಂಡಲಪೂಜೆ

Published on

ಕವಿತಾಳ: ತೋರಣದಿನ್ನಿಯ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ಡಿ.22 ರಂದು ಶ್ರೀ ಏಳು ಮಕ್ಕಳ ತಾಯಮ್ಮ ದೇವಿ, ಶ್ರೀ ವೀರೇಶ ತಾತ ಅವರ ಸಾನ್ನಿಧ್ಯದಲ್ಲಿ ಅಯ್ಯಪ್ಪಸ್ವಾಮಿಯ ಮಂಡಲ ಪೂಜೆ ನಡೆಯಲಿದೆ.

ಕಾರಟಗಿಯ ಶ್ರೀಧರ ಗುರುಸ್ವಾಮಿ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಲಿದ್ದು, ಕನ್ಯಾಸ್ವಾಮಿಗಳಿಂದ ಕುಂಭ ಮೆರವಣಿಗೆ, ಅಗ್ನಿ, ಎಣ್ಣೆ ಸೇವೆ ನಡೆಯಲಿದೆ. ಗುರುಸ್ವಾಮಿಗಳಾದ ಮಹಾದೇವ ಯಲಗೂರು, ಚಿನ್ನಿ ರಾಘವೇಂದ್ರ ಮಸ್ಕಿ, ತಾತಾರಾಜು ಸಾಯಿ ಕ್ಯಾಂಪ್, ವಿರುಪಣ್ಣ ಸಿಂಧನೂರು ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net