

ಹೊಳೆನರಸೀಪುರ: ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ಸೆ.21 ಮಹಾಗಣಪತಿ ಹೋಮ ಹಾಗೂ ಸಾರ್ವಜನಿಕರಿಗೆ ಅನ್ನಸಂಪರ್ತಣೆ ಏರ್ಪಡಿಸಲಾಗಿದ್ದು, ಇದರ ಅಂಗವಾಗಿ ಶನಿವಾರ ಗಣಪತಿ ಪೆಂಡಾಲ್ ವೇದಿಕೆಯಲ್ಲಿ ಗೌರವಾಧ್ಯಕ್ಷ ಟಿ.ಶಿವಕುಮಾರ್, ಕಾರ್ಯಾಧ್ಯಕ್ಷ ಎಚ್.ಎಸ್. ಪುಟ್ಟಸೋಮಪ್ಪ, ಕಾಂಗ್ರೆಸ್ ಮುಖಂಡ ಎಚ್.ವಿ. ಪುಟ್ಟರಾಜು ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಸಿದರು.
ಈ ಕಾರ್ಯಕ್ರಮದಲ್ಲಿ 12 ರಿಂದ 15 ಸಾವಿರ ಜನರು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಲಿದ್ದು, ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆ ಬಗ್ಗೆ ಚರ್ಚಿಸಿದರು. ಬಾಣಸಿಗ ಸತೀಶ್ ಮತ್ತು ತಂಡದವರಿಗೆ ಊಟೋಪಚಾರ ಸಿದ್ಧಪಡಿಸುವ ಹಾಗೂ ಬಡಿಸುವ ವ್ಯವಸ್ಥೆಯ ಜವಾಬ್ದಾರಿ ನೀಡಿ ಇದರ ನೇತೃತ್ವನ್ನು ಸಮಿತಿಯ ಪ್ರಸಾದ ಸಮಿತಿಯ ಶಿವಕುಮಾರ್‌ಗೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಅನ್ನಸಂತರ್ಪಣೆಗೆ ಸಂಸದ ಶ್ರೇಯಶ್ ಪಟೇಲ್ 5 ಕ್ವಿಂಟಾಲ್ ಅಕ್ಕಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ವಿ. ಪುಟ್ಟರಾಜು ತಿಳಿಸಿದರು. ಇನ್ನುಳಿದಂತೆ ವಿವಿಧ ಜವಾಬ್ದಾರಿಗಳನ್ನು ಸಮಿತಿಯ ಸದಸ್ಯರಿಗೆ ನೀಡಿದರು.
ಅನ್ನಸಂತರ್ಪಣೆಗೆ ಸಹಾಯ ನೀಡಬಯಸುವವರು ದವಸ ಧಾನ್ಯ, ತೆಂಗಿನ ಕಾಯಿ, ಬೇಳೆ, ಬೆಲ್ಲ, ತರಕಾರಿ ಇನ್ನಿತರ ಅಡುಗೆ ಪದಾರ್ಥಗಳನ್ನು ನೀಡಬಹುದು ಎಂದರು.
ಪುರಸಭಾ ಸದಸ್ಯ ಎ. ಜಗನ್ನಾಥ್, ರೈಸ್ ಮಿಲ್ ಶಿವಣ್ಣ, ಸುರೇಶ್ ಕುಮಾರ್, ಖಜಾಂಚಿ ಎಸ್. ಗೋಕುಲ್, ವೈ.ವಿ. ಚಂದ್ರಶೇಖರ್, ಡಿಶ್ ಗೋವಿಂದ, ಮುರಳೀಧರ ಗುಪ್ತಾ, ಮಂಜುನಾಥ್, ಜೈಪ್ರಕಾಶ್, ವೈ.ವಿ. ಚಂದ್ರಶೇಖರ್, ಬಾಳೆದೆಲೆ ರಾಮಚಂದ್ರ, ವನಜಾಕ್ಷಿ ಇತರರು ಸಭೆಯಲ್ಲಿ ಭಾಗವಹಿಸಿದ್ದರು.