

ಮೈಸೂರು: ಗಾನ ಚಂದನ ಕಲಾ ಬಳಗದ ವತಿಯಿಂದ ‘ಡಾ.ಎಸ್.ಪಿ.ಬಿ. ಗಾನರಸಾಯನ-2’ ಸಂಗೀತ ಕಾರ್ಯಕ್ರಮವನ್ನು ಫೆ.18ರಂದು ಸಂಜೆ 5ಕ್ಕೆ ನಗರದ ಲಕ್ಷ್ಮೀಪುರಂನ ನಾದಬ್ರಹ್ಮ ಸಂಗೀತ ಸಭಾದಲ್ಲಿ ಆಯೋಜಿಸಲಾಗಿದೆ.
ಗಾಯಕ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಹಾಡಿರುವ ಹಾಡುಗಳನ್ನು ಹಾಡುವ ಮೂಲಕ ಅವರನ್ನು ಸ್ಮರಿಸಲಾಗುತ್ತದೆ. ಜಿಎಲ್‌ಎನ್ ಕಲ್ಯಾಣ ಮಂಟಪದ ಮಾಲೀಕ ದೇವಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸುವರು. ವಿದ್ಯಾವಿಕಾಸ ಸಂಸ್ಥೆ ಅಧ್ಯಕ್ಷ ವಿಕಾಸ್‌ಗೌಡ, ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಇನ್ನಿತರರು ಪಾಲ್ಗೊಳ್ಳುವರು ಎಂದು ಬಳಗದ ಅಧ್ಯಕ್ಷ ಆರ್.ಸುಧೀಂದ್ರ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್.ವಿಶ್ವನಾಥ್, ಆರ್.ನಟರಾಜ್, ಶಶಿಕಲಾ, ಶ್ರೀನಿವಾಸ್, ನಾಗರಾಜ್, ಗೋಪಾಲಕೃಷ್ಣ, ಧನ್ಯಶ್ರೀ, ಪುಟ್ಟಣ್ಣ, ನಾಗಲಕ್ಷ್ಮೀ ಅವರು ವಿವಿಧ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದು, ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರಲಿದೆ ಎಂದರು.