ಉಡುಪಿ ಪುತ್ತಿಗೆ ಮಠದಲ್ಲಿ 18ರಂದು ಚತುರ್ಥ ಪರ್ಯಾಯ

02M.D.R.2
ಮದ್ದೂರು ಪಟ್ಟಣದ ಹೊಳೆ ಆಂಜನೇಯಸ್ವಾಮಿ ದೇಗುಲದಲ್ಲಿ ಸುಶ್ರೀಂದ್ರತೀರ್ಥ ಶ್ರೀಪಾದರು ವಿಶೇಷ ಪೂಜೆ ಸಲ್ಲಿಸಿದರು. ಪ್ರದೀಪಾಚಾರ್ಯ, ಸುರೇಶಾರ್ಚಾಯ ಇದ್ದರು.
Published on

ಮದ್ದೂರು: ಉಡುಪಿಯ ಶ್ರೀ ಪುತ್ತಿಗೆ ಮಠದಲ್ಲಿ ಜ.18ರಂದು ನಡೆಯುವ ಚತುರ್ಥ ಪರ್ಯಾಯವನ್ನು ವಿಶ್ವಗೀತ ಅಭಿಯಾನವಾಗಿ ಆಚರಿಸಲು ಪರ್ಯಾಯ ಪೀಠಾರೋಹಣ ಮಾಡಬೇಕೆಂಬುದು ಶ್ರೀ ಸುಗುಣೇಂದ್ರರ ತೀರ್ಥರ ಸಂಕಲ್ಪವಾಗಿದೆ ಎಂದು ಶ್ರೀಗಳ ಶಿಷ್ಯರಾದ ಸುಶ್ರೀಂದ್ರತೀರ್ಥ ಶ್ರೀಪಾದರು ಹೇಳಿದರು.

ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೇ ಆಂಜನೇಯಸ್ವಾಮಿ ದೇಗುಲದಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಪೂಜಾ ರ್ಕಾಯದಲ್ಲಿ ಪಾಲ್ಗೊಂಡ ನಂತರ ಭಕ್ತರಿಗೆ ಆಶೀರ್ವಚನ ನೀಡಿದ ಅವರು, ಶ್ರೀಕೃಷ್ಣ ಹಾಗೂ ಶ್ರೀಕೃಷ್ಣಗೀತೆಯ ಭಕ್ತರಾದ ಸುಗುಣೇಂದ್ರ ತೀರ್ಥರು 30 ವರ್ಷಗಳ ಹಿಂದೆ ತಮ್ಮ ದ್ವಿತೀಯ ಪರ್ಯಾಯ ಕಾಲದಲ್ಲಿ ಗೀತಾಚಾರ್ಯರನ್ನು ಲಕ್ಷಗೀತ ಲೇಖನ ಯಜ್ಞದ ಮೂಲಕ ಅರ್ಚಿಸಿ ಪವಿತ್ರ ಗೀತಾ ಮಂದಿರವನ್ನು ಸಮರ್ಪಿಸಿದ್ದಾರೆ ಎಂದರು.

ಕೋಟಿ ಭಕ್ತರಿಂದ ಗೀತೆ ಬರೆಯಿಸಿ ಕೃಷ್ಣನಿಗೆ ಅರ್ಪಿಸುವ ಸಂಕಲ್ಪ ಮಾಡಿದ್ದಾರೆ. ಅದನ್ನು ತಮ್ಮ ಸನ್ಯಾಸ ಸ್ವೀಕಾರದ 50ನೇ ವರ್ಷದ ಸುವರ್ಣ ಮಹೋತ್ಸವದ ಕಾಣಿಕೆಯಾಗಿ ಸಮರ್ಪಿಸಲಿದ್ದಾರೆ ಎಂದರು.

ಜ.18ರಂದು ನಡೆಯುವ ಪರ್ಯಾಯ ಚತುರ್ಥದಲ್ಲಿ ರಾಜ್ಯದ ಒಂದು ಕೋಟಿ ಭಕ್ತರಿಂದ ಗೀತ ರಚನೆ ಮಾಡಿ ಶ್ರೀಕೃಷ್ಣನಿಗೆ ಸಮರ್ಪಣೆ ಮಾಡಲಾಗುವುದು. ಶ್ರೀ ಕೃಷ್ಣ ಗೀತಾರಾಧನೆಯಿಂದ ಸನಾತನ ಧರ್ಮ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಪ್ರಧಾನ ಅರ್ಚಕ ಪ್ರದೀಪಾರ್ಚಾಯ, ಸಹ ಅರ್ಚಕರಾದ ಸುರೇಶಾರ್ಚಾಯ, ಕೃಷ್ಣಾರ್ಚಾಯ, ಹಾಗೂ ಜಿ.ಎಂ.ನರಸಿಂಹಮೂರ್ತಿ, ಭಾರ್ಗವ, ಕನ್ನಡ ಸೇನೆ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net