15ರಂದು ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ದಿಗ್ವಿಜಯ ಮಹೋತ್ಸವ

EZZ-7n1U4AAEHjW
Published on

ಮಂಗಳೂರು : ಶ್ರೀ ವೆಂಕಟ್ರಮಣ ದೇವಸ್ಥಾನದಲ್ಲಿ ಚಾತುರ್ಮಾಸ ವೃತದಲ್ಲಿರುವ ಶ್ರೀ ಕಾಶೀಮಠ ಸಂಸ್ಥಾನದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರ ದಿಗ್ವಿಜಯ ಮಹೋತ್ಸವ ಅ. 15ರಂದು ನಡೆಯಲಿದೆ.
ಅಂದು ಸಾಯಂಕಾಲ 5ಕ್ಕೆ ದೇವಸ್ಥಾನದ ಮುಂಭಾಗದಲ್ಲಿ ಮೆರವಣಿಗೆ ಆರಂಭಗೊಳ್ಳಲಿದೆ. ಶ್ರೀ ಮಹಾಮ್ಮಾಯ ದೇವಸ್ಥಾನ ರಸ್ತೆ, ಗದ್ದೆಕೇರಿ, ಮಂಜೇಶ್ವರ ಗೋವಿಂದ ಪೈ ವೃತ್ತ, ಅಮ್ಮೆಂಬಳ ಸುಬ್ಬರಾವ್ ಪೈ ರಸ್ತೆ, ಡೊಂಗರಕೇರಿ, ನ್ಯೂಚಿತ್ರ ಜಂಕ್ಷನ್, ಬಸವನಗುಡಿ ರಸ್ತೆ, ಚಮ್ಮಾರಗಲ್ಲಿ, ಕೆಳರಥಬೀದಿ, ರಥಬೀದಿಯಾಗಿ ಶ್ರೀ ವೆಂಕಟ್ರಮಣ ದೇವಸ್ಥಾನದ ಬಳಿ ಸಮಾಪನಗೊಳ್ಳಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಜಗನ್ನಾಥ ಕಾಮತ್ ತಿಳಿಸಿದ್ದಾರೆ.
ದಿಗ್ವಿಜಯ ಮಹೋತ್ಸವದಲ್ಲಿ ಗಜಪಡೆ, ಅಶ್ವಪಡೆ, ವಿಶೇಷ ಸ್ಯಾಕ್ಸೋಪೋನ್ ತಂಡ, ಪಂಚ ವಾದ್ಯ, ಚೆಂಡೆವಾದನ, ಆಕರ್ಷಕ ನಾಸಿಕ್ ಬ್ಯಾಂಡ್ ತಂಡ, ತಾಲೀಮು, ಹುಲಿವೇಷ ತಂಡಗಳು, 29 ಸ್ತಬ್ಧಚಿತ್ರಗಳು ಇತ್ಯಾದಿ ಸೇರಿದಂತೆ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿವೆ. ಗಜಪಡೆಯ ಆಕರ್ಷಕ ಪ್ರದರ್ಶನ, ಕೇರಳ ಚೆಂಡೆವಾದನ, ಬಣ್ಣ ಬಣ್ಣದ ಕೊಡೆಗಳು, ಬೆಂಕಿ ತಾಲೀಮು ವಿಶೇಷ ಆಕರ್ಷಣೆಯಾಗಲಿದೆ ಎಂದು ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net