12ರಂದು ಹಾಲಸ್ವಾಮಿ ಜಾತ್ರಾ ಮಹೋತ್ಸವ

2 HBH 04
ಹಗರಿಬೊಮ್ಮನಹಳ್ಳಿ ಶ್ರೀ ಹಾಲಸ್ವಾಮಿ ಮಠದಲ್ಲಿ ಜಾತ್ರಾಮಹೋತ್ಸವ ಹಿನ್ನೆಲೆಯಲ್ಲಿ ರಣಗಂಭ ಪ್ರತಿಷ್ಠಾಪಿಸಲಾಯಿತು. ಹಾಲಸಿದ್ದೇಶ್ವರ ಸ್ವಾಮೀಜಿ, ಪ್ರಮುಖರಾದ ಎಚ್.ಎಂ.ಮುದುಕಯ್ಯ, ಮಹಾಂತಯ್ಯ ಸ್ವಾಮೀಜಿ, ಉಮಾಮಹೇಶ್ವರಯ್ಯ, ನಾಗಯ್ಯ, ಖಾನಾವಳಿ ಬಸವರಾಜಪ್ಪ, ಬಿ.ಮಹೇಶ ಮತ್ತು ಗೊಲ್ಲರ ಮಹೇಶ, ಶ್ರೀ ದುರ್ಗಾಂಭಿಕ ದೇವಿ ಅರ್ಚಕ ಹನುಮಂತಪ್ಪ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ಜಾತ್ರಾ ಮಹೋತ್ಸವದ ಅಂಗವಾಗಿ ಪಟ್ಟಣದ ಹಾಲಸ್ವಾಮಿ ಮಠದ ಆವರಣದಲ್ಲಿ ಭಾನುವಾರ ರಣಗಂಭವನ್ನು ಪ್ರತಿಷ್ಠಾಪಿಸಿ ಶ್ರೀ ಹಾಲಸ್ವಾಮಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬಳಿಕ ಹಾಲಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಜಾತ್ರೆಯ ಹಿನ್ನೆಲೆಯಲ್ಲಿ ಇಷ್ಟಲಿಂಗ ಶಿವಯೋಗ ಅನುಷ್ಠಾನ ಕೈಗೊಳ್ಳಲಾಗಿದ್ದು, ಡಿ.10ರಂದು ಜಂಗಮ ವಟುಗಳಿಗೆ ಶಿವದೀಕ್ಷೆ, ಕಾರ್ತಿಕ ದೀಪೋತ್ಸವದ ನಂತರ ರಾತ್ರಿ ಮುಳ್ಳು ಗದ್ದುಗೆ ಉತ್ಸವ ನಡೆಯಲಿದೆ. ಡಿ.11ರಂದು ಸಾಮೂಹಿಕ ಉಚಿತ ವಿವಾಹಗಳು ಮತ್ತು ಧರ್ಮಸಭೆ ಜರುಗಲಿದೆ ಎಂದರು. ಡಿ.12ರಂದು ಹಾಲಸ್ವಾಮಿಯ ಮಹಾ ರಥೋತ್ಸವ ಜರುಗಲಿದ್ದು, ಮಠಾಧೀಶರ ಧರ್ಮಪರಿಷತ್‌ನ ಎಲ್ಲ ಸ್ವಾಮೀಜಿಗಳು ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎಂದರು. ಜಾತ್ರಾಮಹೋತ್ಸವದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net