ಶ್ರೀ ರೇಣುಕಾಚಾರ್ಯರ 36 ಅಡಿ ಮೂರ್ತಿ

10 ಎಸ್ಕೆಪಿ 1t (1)
Published on

ಶಿಕಾರಿಪುರ: ತಾಲೂಕಿನ ಸುಕ್ಷೇತ್ರ ಕಡೇನಂದಿಹಳ್ಳಿಯಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯರ 36 ಅಡಿ ಎತ್ತರದ ಮೂರ್ತಿ ತಲೆ ಎತ್ತಿದ್ದು, ಫೆ.12 ಮತ್ತು 13ರಂದು ಲೋಕಾರ್ಪಣೆಗೊಳ್ಳಲಿದೆ.

ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮಶ್ವೇರ ಜಗದ್ಗುರುಗಳು ಸಾನ್ನಿಧ್ಯ ವಹಿಸಲಿದ್ದು ವಿವಿಧ ಮಠಗಳ ಶ್ರೀಗಳು, ಹಲವು ಗಣ್ಯರು ಉಪಸ್ಥಿತಲಿರಲಿದ್ದಾರೆ. ಕಡೇನಂದಿಹಳ್ಳಿ ಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮೀಜಿಗಳ ಅವರ ವಿಶೇಷ ಆಸಕ್ತಿಯ ಫಲವಾಗಿ ಶ್ರೀ ರೇಣುಕಾಚಾರ್ಯರ ಬೃಹತ್ ಮೂರ್ತಿ ನಿರ್ಮಾಣಗೊಂಡಿದೆ. ವೀರಶೈವ ಸಿದ್ಧಾಂತದ 36 ತತ್ವಗಳ ಪ್ರತೀಕವಾಗಿ ಜಗದ್ಗುರುಗಳ ಮೂರ್ತಿಯನ್ನು ನಿರ್ಮಿಸಲಾಗಿದೆ. ಧ್ಯಾನಕ್ಕಾಗಿ ನೆಲಮಾಳಿಗೆ ಇದ್ದು, ಅದರ ಮೇಲೆ 24 ಕಂಬಗಳ ಶಿಲಾಮಂಟಪ ಕಟ್ಟಲಾಗಿದೆ. ಶಿಲಾಮಂಟಪದ ಮೇಲ್ಭಾಗದಲ್ಲಿ ಶ್ರೀಗಳ ಬೃಹತ್ ಮೂರ್ತಿ ಆವಿರ್ಭವಿಸಿದೆ.
ಶ್ರೀ ರೇಣುಕಾಚಾರ್ಯರ ಉದ್ಭವ ಸ್ಥಳವಾದ ತೆಲಂಗಾಣದ ಕೊಲಂಪಾಕದ ಸೋಮೇಶ್ವರ ಲಿಂಗದ ಮಾದರಿಯಲ್ಲಿ ನಿರ್ಮಿಸಲಾಗಿದ್ದು ಲಿಂಗದ ಒಳಗೆ ಗರ್ಭಗುಡಿ, ಬಸವಣ್ಣ ಅವರ ಮೂರ್ತಿ ಸಹ ಇದೆ. ದೊಡ್ಡಬಳ್ಳಾಪುರ ಭಾಗದ ಶಿಲೆಗಳನ್ನು ಬಳಸಲಾಗಿದೆ. ಶಿಲಾಮಂಟಪ ಹಾಗೂ ಮೂರ್ತಿ ನಿರ್ಮಾಣಕ್ಕೆ 2 ವರ್ಷ ಆಗಿದ್ದು, ಅಂದಾಜು 2 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಶಿವಮೊಗ್ಗದ ಜೀವನ ಕಲಾ ತಂಡದವರು ಆಕರ್ಷಕಣೀಯವಾಗಿ ಮೂರ್ತಿ ನಿರ್ಮಾಣ ಮಾಡಿದ್ದರೆ, ಶಿಲಾಮಂಟಪವನ್ನು ಮುರುಡೇಶ್ವರದ ಲಕ್ಷ್ಮಣ ಮತ್ತು ಕಾರ್ಕಳದ ಕೃಷ್ಣಾಚಾರ್ಯ ಪೂರ್ಣಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net