ನಿಗದಿತ ಅವಧಿಗೆ ಕೆಲಸ ಮುಗಿಸಿ

20Athanigrameen1
Published on

ಅಥಣಿ ಗ್ರಾಮೀಣ: ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಕಾಮಗಾರಿಯನ್ನು ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಮುಗಿಸಬೇಕು ಎಂದು ಕರ್ನಾಟಕ ನೀರಾವರಿ ನಿಗಮ ಬೆಳಗಾವಿ ಉತ್ತರ ವಲಯದ ಮುಖ್ಯ ಅಭಿಯಂತ ಬಿ.ಆರ್.ರಾಠೋಡ ಹೇಳಿದರು.

ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯ ಜಾಕ್‌ವೆಲ್‌ನಿರ್ಮಾಣ ಕಾಮಗಾರಿಗೆ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಬೇಕು. ಪೈಪ್ ಹಾಕುವಾಗ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಕೈಗೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಸಲಹೆ ನೀಡಿದರು.

ಅಥಣಿ ನೀರಾವರಿ ನಿಗಮ ಸಹಕಾರಿ ಕಾರ್ಯನಿರತ ಅಭಿಯಂತ ಪ್ರವೀಣ ಹುಣಸಿಕಟ್ಟಿ, ಅಭಿಯಂತರಾದ ಭರತೇಶ ಮಹಿಷವಾಡಗಿ, ಶಿವಶರಣ ಕರಡಿ, ಮುರಗೇಶ ಬೊಮ್ಮನಾಳ, ಎಸ್‌ಎನ್‌ಸಿ ಕಂಪನಿ ಪ್ರೊಜೆಕ್ಟ್ ಮ್ಯಾನೇಜರ್ ಶಿವಶಂಕರ, ಶಶಿಧರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net