

ಬೆಳಗಾವಿ: ಸರ್ವಜ್ಞ ಲೋಕಾನುಭವಿ ಕವಿ, ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ತ್ರಿಪದಿ ರಚಿಸಿದ್ದಾರೆ. ಸರ್ವಜ್ಞರು ಸಾರ್ವಕಾಲಿಕ ಶ್ರೇಷ್ಠ ಕವಿ ಎಂದು ಹಿರಿಯ ಸಾಹಿತಿ ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸರ್ವಜ್ಞರು ಬರೆದ ತ್ರಿಪದಿಗಳು ಪ್ರತಿಯೊಬ್ಬರ ಜೀವನದಲ್ಲಿ ಮುಖ್ಯ ವಿಷಯಗಳನ್ನು ಒಳಗೊಂಡಿವೆ. ಎಂದರು.
ಸರ್ವಜ್ಞರ ತ್ರಿಪದಿಗಳಲ್ಲಿ ಬ್ರಹ್ಮಾಂಡ, ಖಗೋಳಶಾಸ, ಗುರುವಿನ ಮಹಿಮೆ, ಸತ್ಯಾನ್ವೇಷನೆ, ಶರಣರ ಬಗ್ಗೆ, ಜ್ಯೋತಿಷ್ಯ ಶಾಸದ, ವ್ಯಾಪಾರ ವಾಣಿಜ್ಯ, ಸೌರ ಶಾಸ, ದಾಂಪತ್ಯ ಜೀವನ, ನಿಸರ್ಗ, ಮಾನವೀಯ ವೌಲ್ಯಗಳ ಬಗ್ಗೆ ಅತ್ಯಂತ ಕಡಿಮೆ ಶಬ್ಧ ಬಳಸಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ತಿಳಿಸಿದ್ದಾರೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಮಾಜದ ಮುಖಂಡರಾದ ಸುರೇಶ ವೈದ್ಯ, ನಿಂಗಪ್ಪ ಕುಂಬಾರ, ಐ.ಎಸ್. ಕುಂಬಾರ, ಸಿ.ವಿ.ಯಡೂರ, ಅಣ್ಣಪ್ಪ ಕುಂಬಾರ, ಮೋಹನ ಬೇವಿನಗಿಡದ, ಸುಶೀಲಾ ಕುಂಬಾರ ಇತರರಿದ್ದರು.