ಓಮಿನಿ ಡಿಕ್ಕಿಯಾಗಿ ಬೈಕ್​ ಸವಾರ ಸಾವು

Bike Accident
Published on

ರಟ್ಟಿಹಳ್ಳಿ: ಓಮಿನಿ ಕಾರು ಡಿಕ್ಕಿಯಾಗಿ ಬೈಕ್​ ಸವಾರ ಮೃತಪಟ್ಟ ಘಟನೆ ತಾಲೂಕಿನ ಮರದಕೇರಿ ಗ್ರಾಮದ ಬಳಿ ಸೋಮವಾರ ನಡೆದಿದೆ.

ತಾಲೂಕಿನ ಚಿಕ್ಕಕಬ್ಬಾರ ಗ್ರಾಮದ ಮಾಬುಸಾಬ ಫಕ್ಕೀರಸಾಬ ಹುಬ್ಬಳ್ಳಿ (20) ಮೃತ ವ್ಯಕ್ತಿ.

ಈತ ರಸ್ತೆ ಬದಿ ತೆರಳುತ್ತಿದ್ದ ಸಮಯದಲ್ಲಿ ಓಮಿನಿ ಕಾರು ಬಂದು ಡಿಕ್ಕಿಯಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಮಾಬುಸಾಬ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ರಟ್ಟಿಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net