

ಬ್ರಹ್ಮಾವರ: ವಾರಂಬಳ್ಳಿ ಓಂಕಾರ ಸಂಜೀವಿನಿ ಒಕ್ಕೂಟ ಗ್ರಾಮ ಪಂಚಾಯಿತಿ ಮಟ್ಟದ ವಾರ್ಷಿಕ ಮಹಾಸಭೆಯು ಒಕ್ಕೂಟದ ಹೇವಾ ಜಗನ್ನಾಥ್ ಪೂಜಾರಿ ಅಧ್ಯಕ್ಷತೆಯಲ್ಲಿ ಸೋಮವಾರ ವಾರಂಬಳ್ಳಿ ಪಂಚಾಯಿತಿ ಸಭಾಂಗಣದಲ್ಲಿ ಜರುಗಿತು.
ಫಸಲ್ ವಿಮೆ ಜಿಲ್ಲಾ ಸಂಯೋಜಕ ರವೀಂದ್ರ, ಬ್ರಹ್ಮಾವರ ತಾಲೂಕು ಸಂಪನ್ಮೂಲ ವ್ಯಕ್ತಿ ರೀತಾ, ಸೀತಾ ಸಂಜೀವಿನಿ ತಾಲೂಕು ಮಟ್ಟದ ಕಾರ್ಯದರ್ಶಿ ಬೇಬಿ, ಕೃಷಿ ಇಲಾಖೆಯ ವೆಂಕಟೇಶ್, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಡಾ.ದೀಕ್ಷಿತಾ ಉಪಯುಕ್ತ ವಾಹಿತಿ ನೀಡಿದರು.
ವಾರಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ ಬಿ.ಆರ್., ಉಪಾಧ್ಯಕ್ಷೆ ಉವಾಬಾಯಿ, ಕಾರ್ಯದರ್ಶಿ ಶೇಖರ್ ನಾಯ್ಕ, ವಾರಂಬಳ್ಳಿ ಪಂಚಾಯಿತಿ ವಲಯ ಮೇಲ್ವಿಚಾರಕಿ ಸ್ವಾತಿ, ಆರ್ಥಿಕ ಸಾಕ್ಷರತಾ ಕೇಂದ್ರ ತಂಡ ಸಂಯೋಜಕಿ ಅರ್ಪಿತಾ ಹಾಗೂ ವಾರಂಬಳ್ಳಿ ಪಂಚಾಯಿತಿ ಸದಸ್ಯರು, ಓಂಕಾರ ಸಂಜೀವಿನಿ ಒಕ್ಕೂಟ ಪದಾಧಿಕಾರಿಗಳು, ಎಂಬಿಕೆ, ಎಲ್‌ಸಿಆರ್‌ಪಿ, ಕೃಷಿ ಸಖಿ, ಪಶು ಸಖಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.