ಓಂಕಾರ ಉಚ್ಚಾರಣೆಯಿಂದ ಮನಸ್ಸಿನಲ್ಲಿ ಶಾಂತಿ

Devaki
ದೇವಕಿ ಅಮ್ಮ
Published on

ಮಾನ್ವಿ: ಆತ್ಮ ಮತ್ತು ಪರಮಾತ್ಮನ ಬಗ್ಗೆ ತಿಳಿದುಕೊಳ್ಳಬೇಕು. ಓಂಕಾರದ ಉಚ್ಚಾರಣೆಯಿಂದ ಮನಸ್ಸಿನಲ್ಲಿ ಶಾಂತಿ ನೆಲೆಸುತ್ತದೆ ಎಂದು ರಾಯಪುರದ ಓಂ ಮಂಡಳಿ ಶಿವಶಕ್ತಿ ಅವತಾರ ಸೇವಾ ಸಂಸ್ಥಾನದ ದೇವಕಿ ಅಮ್ಮ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬುಧವಾರ ಓಂ ಮಂಡಳಿ ಶಿವಶಕ್ತಿ ಅವತಾರ ಸೇವಾ ಸಂಸ್ಥಾನ ಮಾನ್ವಿ ಶಾಖೆಯಿಂದ ಹಮ್ಮಿಕೊಂಡಿದ್ದ ಶಿವಾನುಭೂತಿ, ಶಿವಮಿಲನ, ಶಿವಧ್ಯಾನ ಹಾಗೂ ವಂದೇಮಾತರಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಲಿಯುಗದ ಅಂತ್ಯವಾಗುತ್ತಿದೆ. ಸತ್ಯಯುಗದ ಕಡೆಗೆ ನಾವು ನಡೆಯುವ ಸಮಯ ಕಡಿಮೆಯಿದೆ. ಸತ್ಯಯುಗದಲ್ಲಿ ಎಲ್ಲವೂ ಒಂದೆಯಾಗಿರುತ್ತದೆ. ಏಕ ಭಾಷೆ, ಏಕ ಧರ್ಮ, ಏಕ ದೇವ ಉಪಾಸನೆ ನಡೆಯಲಿದೆ ಎಂದು ತಿಳಿಸಿದ ಅವರು, ನಮ್ಮನ್ನು ನಾವು ಬಂಧನಲ್ಲಿಟ್ಟುಕೊಳ್ಳದೆ ಪರಮಾತ್ಮನಲ್ಲಿ ಆತ್ಮವನ್ನು ಧ್ಯಾನದ ಮೂಲಕ ಒಂದಾಗಿಸಿದಾಗ ಮಾತ್ರ ನಮ್ಮನ್ನು ನಾವು ಮುಕ್ತವಾಗಿಸಿಕೊಳ್ಳುವುದಕ್ಕೆ ಸಾಧ್ಯ ಎಂದರು.

ಬಳಿಕ ವಂದೇಮಾತರಂ ಸಾಮೂಹಿಕ ಗೀತ ಗಾಯನ ನಡೆಯಿತು. ಮಾನ್ವಿ ಶಾಖೆಯ ಅಕ್ಕಮ್ಮ, ವಿವಿಧ ಶಾಖೆಗಳ ಸಾಧಕರಾದ ದ್ವಾರಕ, ವಿಜಯ, ನೇಹಲ್, ಶಿವಮ್, ಮಂಜುನಾಥ ಶಿಖರಿಪುರ, ರೇಖಾ ದೀದಿ, ಸಂಗಮ ದೀದಿ, ಸೋನಿ ದೀದಿ, ರುದ್ರಪ್ಪನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net