ಓಂಕಾರಗಿರಿಯ ಶಿವಾಚಾರ್ಯರ ಸಾಧನೆ ಅಸಾಮಾನ್ಯ: ಡಾ. ಅಭಿನವ ಕೊಟ್ಟೂರೇಶ್ವರ ಶ್ರೀಗಳು

10GDG05
Published on

ವಿಜಯವಾಣಿ ಸುದ್ದಿಜಾಲ ಗದಗ
ಗುಡ್ಡಗಾಡು ಪ್ರದೇಶದಲ್ಲಿ ಓಂಕಾರಗಿರಿ ಓಂಕಾರೇಶ್ವರ ಮಠದ ಶ್ರೀಗಳು ಭಕ್ತರು ಹರಿದು ಬರುವಂತೆ ಮಾಡಿರುವುದು ಅಸಾಮಾನ್ಯ ಕೆಲಸ ಎಂದು ಹರ್ಲಾಪೂರ ಕೊಟ್ಟೂರೇಶ್ವರ ಮಠದ ಡಾ. ಅಭಿನವ ಕೊಟ್ಟೂರೇಶ್ವರ ಶ್ರೀಗಳು ಹೇಳಿದರು.
ಸ್ಥಳಿಯ ಆದಿತ್ಯ ನಗರದಲ್ಲಿರುವ ಓಂಕಾರೇಶ್ವರ ಮಠದಲ್ಲಿ ಶಿವರಾತ್ರಿ ದಶಮಾನೋತ್ಸವ ಹಾಗೂ ಕ್ಕೀರೇಶ್ವರ ಶ್ರೀಗಳ ಷಶ್ಠಬ್ದಿರ್ಪೂತಿ ಸಮಾರಂಭದ ಅಂಗವಾಗಿ 60 ಬಿಲ್ವಪತ್ರಿ ಸಸಿಗಳ ವಿತರಣೆ, 60 ಸಾಧಕರಿಗೆ, ಸದ್ಬಕ್ತರಿಗೆ ಸನ್ಮಾನ, ಓಂಕಾರಶ್ರೀ ಪ್ರಶಸ್ತಿ ಪ್ರಧಾನ ಹಾಗೂ ಗ್ರಂಥಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಕೊಂಪೆಯಾಗಿದ್ದ ಈ ಗುಡ್ಡದ ಜಾಗದಲ್ಲಿ ಹಂಪೆಯನ್ನು ನಿರ್ಮಾಣ ಮಾಡಿ ಬರುವ ಭಕ್ತರಿಗೆ ಸದಾವಕಾಲ ಶಾಸ್ತ್ರ, ಶಿವಾನುಭವ ಹಾಗೂ ಧರ್ಮಜಾಗೃತಿ ಮೂಡಿಸುತ್ತಿರುವ ಕ್ಕೀರೇಶ್ವರ ಶಿವಾಚಾರ್ಯರರ ಸಾಧನೆ ಅಸಾಮಾನ್ಯ. ಅನೇಕ ಯುವಕರಿಗೆ ಮಾರ್ಗದರ್ಶಕರಾಗುವ ಮೂಲಕ ನಾಡುಕಂಡ ಅಪರೂಪದ ಶ್ರೀಗಳಾಗಿದ್ದಾರೆ ಎಂದು ಕೊಟ್ಟೂರೇಶ್ವರ ಶ್ರೀಗಳು ಹೇಳಿದರು.
ಓಂಕಾರ ಶ್ರೀ ಪ್ರಶಸ್ತಿ ಪಡೆದು ಮಾತನಾಡಿದ ಶಿವಲಿಂಗಯ್ಯಶಾಸ್ತ್ರಿಗಳು ಹಿರೇಮಠ, ನನಗೆ ಬಹಳಷ್ಟು ಪ್ರಶಸ್ತಿಗಳು ದೊರಕಿದ್ದು ಎಲ್ಲ ಪ್ರಶಸ್ತಿಕ್ಕಿಂತ ಓಂಕಾರ ಶ್ರೀ ಪ್ರಶಸ್ತಿ ದೊರಕಿರುವುದು ನನ್ನ ಪೂರ್ವ ಜನ್ಮದ ಪುಣ್ಯವಾಗಿದೆ. ಕಲಾವಿದರಿಗೆ ಇಂತಹ ಪ್ರೊತ್ಸಾಹ ಸದಾ ಇರಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net