ಮಂಗಳೂರಿಗೂ ಕಾಲಿಟ್ಟ ಒಮಿಕ್ರಾನ್, ಐವರಿಗೆ ಪಾಸಿಟಿವ್

omicron
ಸಾಂದರ್ಭಿಕ ಚಿತ್ರ
Published on

ಮಂಗಳೂರು: ದೇಶದಲ್ಲಿ ನಿಧಾನವಾಗಿ ಪಸರಿಸುತ್ತಿರುವ ಒಮಿಕ್ರಾನ್‌ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಣಿಸಿದೆ.

ಮಂಗಳೂರಿನ ಎರಡು ಶಿಕ್ಷಣ ಸಂಸ್ಥೆಗಳಲ್ಲಿ ಒಟ್ಟು ಐದು ಮಂದಿಯಲ್ಲಿ ಒಮಿಕ್ರಾನ್‌ ಪ್ರಕರಣಗಳು ವರದಿಯಾಗಿವೆ. ದ.ಕ. ಜಿಲ್ಲೆಯಲ್ಲಿ ಎರಡು ಕರೊನಾ ಕ್ಲಸ್ಟರ್‌ಗಳಿದ್ದು ಒಂದರಲ್ಲಿ ನಾಲ್ಕು ಹಾಗೂ ಇನ್ನೊಂದರಲ್ಲಿ 2 ಒಮಿಕ್ರಾನ್‌ ವರದಿಯಾಗಿದೆ.

ಈ ಎರಡರಲ್ಲಿ ಒಟ್ಟು 33 ಕರೊನಾ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್‌ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಇವು ಒಂದು ವಾರಕ್ಕಿಂತ ಹಿಂದಿನ ಪ್ರಕರಣವಾಗಿದ್ದು, ಈಗಷ್ಟೆ ಜೆನೊಮಿಕ್ ವರದಿ ಬಂದಿದ್ದು ಒಮಿಕ್ರಾನ್ ದೃಢಪಟ್ಟಿದೆ. - ಡಾ. ರಾಜೇಂದ್ರ ಕೆ.ವಿ. ದ.ಕ. ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net