ಲೊಕ್ಕನಹಳ್ಳಿ ಗ್ರಾಪಂನಲ್ಲಿ ಒಂಬಡ್ಸ್‌ಮನ್ ಪರಿಶೀಲನೆ

30 HANUR 3
ಲೊಕ್ಕನಹಳ್ಳಿ ಗ್ರಾಮಕ್ಕೆ ನರೇಗಾ ಒಂಬುಡ್ಸ್‌ಮನ್ ಶಂಕರ್ ಭೇಟಿ ನೀಡಿ ದೂರಿರುವ ಕಾಮಗಾರಿಗಳನ್ನು ಪರಿಶೀಲಿಸಿದರು. ನಾಗೇಶ್, ರಘುನಾಥ್ ಇತರರು ಇದ್ದರು.
Published on

ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಮಗಾರಿ ಕೈಗೊಳ್ಳದೆ ಲಕ್ಷಾಂತರ ರೂ. ಪಾವತಿಸಲಾಗಿದ್ದು, ಅವ್ಯವಹಾರ ನಡೆದಿದೆ ಎಂದು ಪಿಡಿಒ, ಗ್ರಾಪಂ ಅಧ್ಯಕ್ಷ ಹಾಗೂ ನರೇಗಾ ತಾಂತ್ರಿಕ ಇಂಜಿನಿಯರ್ ವಿರುದ್ಧ ಗ್ರಾಮದ ರವಿ ಎಂಬುವರು ನೀಡಿದ ದೂರಿನ ಮೇರೆಗೆ ಶುಕ್ರವಾರ ನರೇಗಾ ಒಂಬಡ್ಸ್‌ಮನ್ ಶಂಕರ್ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನಾ ವೇಳೆ ದೂರುದಾರ ರವಿ ಮಾತನಾಡಿ, ಜಿಲ್ಲಾ ಪಂಚಾಯಿತಿ ವತಿಯಿಂದ ನಡೆಸಲಾಗಿರುವ ಕಾಮಗಾರಿ ಸ್ಥಳದಲ್ಲಿ ಗ್ರಾಪಂ ವತಿಯಿಂದ ನಡೆದಿರುವ ಕಾಮಗಾರಿ ಎಂದು ನಾಮಫಲಕ ಅಳವಡಿಸಿ ಬಿಲ್ ಪಾವತಿಸಲಾಗಿದೆ. ಬಲ್ಲಾಳ ಸಮುದಾಯದ ಸ್ಮಶಾನ ಅಭಿವೃದ್ಧಿ ಕಾಮಗಾರಿಗೆ 1.5 ಲಕ್ಷ ರೂ. ಹಣ ಪಾವತಿಸಲಾಗಿದೆ. ಆದರೆ ಇಲ್ಲಿ ಯಾವುದೇ ಕಾಮಗಾರಿ ನಡೆದಿಲ್ಲ. ಇನ್ನು ಗ್ರಾಪಂ ವ್ಯಾಪ್ತಿಯಲ್ಲಿ 302 ವಿದ್ಯುತ್ ಕಂಬಗಳಿದ್ದು, ಬೀದಿ ದೀಪದ ನಿರ್ವಹಣೆಗೆ ಪ್ರತಿವರ್ಷ ವಿದ್ಯುತ್ ಬಲ್ಬ್‌ಗಳಿಗೆ ಗ್ಯಾರಂಟಿ ಇದ್ದರೂ 7 ಲಕ್ಷ ರೂ. ಪಾವತಿಯಾಗಿದೆ. ಮೋಟಾರ್‌ಗಳಿಗೆ 2 ವರ್ಷ ಗ್ಯಾರಂಟಿ ಇದ್ದರೂ ಪ್ರತಿ ವರ್ಷ ಹಲವು ಬಾರಿ ರಿಪೇರಿ ಎಂದು ಬಿಲ್ ಪಾವತಿಸಲಾಗಿದ್ದು, ಹಣ ದುರುಪಯೋಗವಾಗಿದೆ ಎಂದು ದೂರಿದರು. ಈ ವೇಳೆ ಒಂಬಡ್ಸ್ ಮನ್ ಶಂಕರ್ ಮಾತನಾಡಿ, ದೂರುದಾರರು ನೀಡಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಲಾಗಿದ್ದು, ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಲಾಗುವುದು ಎಂದು ತಿಳಿಸಿದರು. ಈ ವೇಳೆ ಪಿಡಿಒ ರಘುನಾಥ್, ಗ್ರಾಪಂ ಅಧ್ಯಕ್ಷ ನಾಗೇಶ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net