ದಸರಾ ಉತ್ಸವಕ್ಕೆ ಚಾಲನೆ

SSK NEW
Published on

ಹುಬ್ಬಳ್ಳಿ : ಹಳೇ ಹುಬ್ಬಳ್ಳಿಯ ಚನ್ನಪೇಟನಲ್ಲಿ ಓಂ ಯೂಥ್ ಗ್ರೂಪ್ ವತಿಯಿಂದ ಆಯೋಜಿಸಿದ್ದ ದಸರಾ ಉತ್ಸವಕ್ಕೆ ಸಂತೋಷ ಲಾಡ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಲಾಡ್, ಎಸ್​ಎಸ್​ಕೆ ಸಮಾಜ ಅನೇಕ ಸಾಂಸ್ಕೃತಿಕ ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಎಸ್​ಎಸ್​ಕೆ ಸಮಾಜ ತನ್ನದೇ ಆದ ಸಾಂಸ್ಕೃತಿಕತೆ, ಪರಂಪರೆ ಹೊಂದಿದೆ ಎಂದರು.

ಎಸ್​ಎಸ್​ಕೆ ಸಮಾಜದ ಮಹಿಳೆಯರು ಮತ್ತು ಯುವಕರು ಇದೇ ಸಂದರ್ಭದಲ್ಲಿ ದಾಂಡಿಯಾ ನೃತ್ಯವನ್ನಾಡಿದರು.

ಸಮಾಜದ ಧರ್ಮದರ್ಶಿ ಸತೀಶ ಮೆಹರವಾಡೆ, ಹá-ಡಾ ಮಾಜಿ ಅಧ್ಯಕ್ಷ ನಾಗೇಶ್ ಕಲಬುರ್ಗಿ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net