ಓಂ ಶ್ರೀನಿಕೇತನ ಶಿಕ್ಷಣ ಸಂಸ್ಥೆಗೆ ಶೇ.91.16 ಫಲಿತಾಂಶ

SRP_09-Tashmiya-02jpj
ತಸ್ಮಿಯ ದುಲರಿಜಾನ್-577
Published on

ಶ್ರೀರಂಗಪಟ್ಟಣ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಟ್ಟಣದ ಓಂ ಶ್ರೀನಿಕೇತನ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜು ಶೇ.91.16 ಫಲಿತಾಂಶ ಪಡೆದಿದೆ.

ಪರೀಕ್ಷೆ ಬರೆದಿದ್ದ ಒಟ್ಟು 36 ವಿದ್ಯಾರ್ಥಿಗಳಲ್ಲಿ 8 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 21 ವಿದ್ಯಾರ್ಥಿಗಳು ಪ್ರಥಮ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.

ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ತಸ್ಮಿಯಾ ದುಲರಿಜಾನ್ 577(ಶೇ.96.16) ಅಂಕಗಳಿಸಿ ತಾಲೂಕಿಗೆ ಟಾಪರ್ ಆಗಿದ್ದಾರೆ. ಡಿ.ವರ್ಷಿಣಿ 574(95.66), ಎಂ.ಹೇಮಂತ್ 572(95.33), ಕೆ.ಕಾವ್ಯಾ 566(94.33), ಕತೀಜಾ 555(92.5), ಐಶ್ವರ್ಯಾ 543(90.5), ಲಕ್ಷ್ಮೀ-533(88.83), ಗೌಸ್-518(86.33) ಅಂಕಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಓಂ ಶ್ರೀನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಪುಟ್ಟೇಗೌಡ, ಡೀನ್ ಮಂಜುರಾಮ್ ಮತ್ತು ಪ್ರಾಂಶುಪಾಲ ಶಿವಕುಮಾರ್, ಸಂಜಯ್ ನೇತೃತ್ವದ ಬೋಧಕ ತಂಡಕ್ಕೆ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net