ಓಂ ಶಿವಂ ಸೆ. 5ಕ್ಕೆ ತೆರೆಗೆ

New PM 2 New
Published on

ಹುಬ್ಬಳ್ಳಿ : ದೀಪಾ ಫಿಲಂಸ್ ಅಡಿಯಲ್ಲಿ ನಿರ್ವಿುಸಿರುವ ‘ಓಂ ಶಿವಂ’ ಕನ್ನಡ ಚಲನಚಿತ್ರ ಸೆ. 5ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಚಿತ್ರದ ನಿರ್ದೇಶಕ ಅಲ್ವಿನ್, ಮಂಡ್ಯ, ಮೈಸೂರು, ಮಂಗಳೂರು, ಬೆಂಗಳೂರು ಮತ್ತು ಕೃಷ್ಣಗಿರಿಯಲ್ಲಿ 45 ದಿನಗಳವರೆಗೆ ಚಿತ್ರೀಕರಣ ಮಾಡಲಾಗಿದೆ ಎಂದರು.

ನಾಯಕ ನಟನಾಗಿ ಭಾರ್ಗವ ಕೃಷ್ಣ ಹಾಗೂ ನಾಯಕಿ ನಟಿಯಾಗಿ ವಿರಾನಿಕಾ ನಟಿಸಿದ್ದಾರೆ. ಇದೊಂದು ಕೌಟುಂಬಿಕ ಚಿತ್ರ. ಮೊಬೈಲ್ ಫೋನ್​ನ ಹೆಚ್ಚು ಬಳಕೆ, ಯುವತಿಯರು ತಮ್ಮ ಫೋಟೊವನ್ನು ಬೇರೆಯವರಿಗೆ ಕಳುಹಿಸಿದರೆ ಆಗುವ ಅನಾಹುತ ಮತ್ತಿತರ ಘಟನೆಗಳನ್ನು ಮನಮುಟ್ಟುವಂತೆ ಚಿತ್ರೀಕರಿಸಲಾಗಿದೆ. ನೈಜ ಕಥೆ ಆಧಾರಿತ ರೋಮ್ಯಾಂಟಿಕ್ ಆಕ್ಷನ್ ಚಿತ್ರ ಇದಾಗಿದೆ ಎಂದು ಹೇಳಿದರು.

ಓಂ ಶಿವಂ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ವಿಜಯ ಯಾಡಿರ್É ಸಂಗೀತ ಸಂಯೋಜನೆ ಮಾಡಿದ್ದಾರೆ. ವೀರೇಶ ಎನ್​ಡಿಎ ಛಾಯಾಗ್ರಹಣ ಮಾಡಿದ್ದು, ಸತೀಶ ಅವರು ಸಂಕಲನ ಮಾಡಿದ್ದಾರೆ. ಡಾ. ವಿ. ನಾಗೇಂದ್ರ ಪ್ರಸಾದ, ಕವಿರಾಜ, ಕೌಸ್ ಪೀರ್ ಅವರು ಹಾಡುಗಳನ್ನು ರಚಿಸಿದ್ದಾರೆ. ಕೌರವ ವೆಂಕಟೇಶ ಅವರ ಸಾಹಸ ನಿರ್ದೇಶನ, ಮಳವಳ್ಳಿ ಸಾಯಿಕೃಷ್ಣ ಅವರ ಸಂಭಾಷಣೆ ಇದೆ ಎಂದು ತಿಳಿಸಿದರು.

ನಿರ್ಮಾಪಕ ಕೆ.ಎನ್. ಕೃಷ್ಣಾ, ನಾಯಕ ನಟ ಭಾರ್ಗವ ಕೃಷ್ಣ, ನಾಯಕಿ ನಟಿ ವಿರಾನಿಕಾ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net