ಓಂ ನಗರ ಮಾರ್ಗದರ್ಶಿ ಬಿಡುಗಡೆ

Published on

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ಓಂನಗರದ ಆರ್.ಕೆ. ಕೊಕಾಟಿ ಪ್ರೌಢಶಾಲೆಯಲ್ಲಿ ಓಂ ನಗರ ಮಾರ್ಗದರ್ಶಿ ಪುಸ್ತಕ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ ಭಾನುವಾರ ಏರ್ಪಡಿಸಲಾಗಿತ್ತು.

ಶಾಸಕ ಮಹೇಶ ಟೆಂಗಿನಕಾಯಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ತಂದೆ-ತಾಯಿಯನ್ನು ಹೇಗೆ ಗೌರವಿಸಬೇಕೆಂಬುದರ ಬಗ್ಗೆ ಈ ಮಾರ್ಗದರ್ಶಿಯು ಮಕ್ಕಳಿಗೆ ಉಪಯುಕ್ತವಾದ ಸಂಗ್ರಹವಾಗಿದೆ ಎಂದರು.

ಪಾಲಿಕೆ ಸದಸ್ಯರಾದ ತಿಪ್ಪಣ್ಣ ಮಜ್ಜಗಿ, ಉಮೇಶಗೌಡ ಕೌಜಗೇರಿ ಮಾತನಾಡಿ, ಓಂ ನಗರ ಅಭಿವದ್ಧಿಗೆ ಸದಾ ಬದ್ಧ ಎಂದರು.

ರಮೇಶ ಮಹದೇವಪ್ಪನವರ, ಮಾರ್ಗದಶಿರ್ಗೆ ಪ್ರಾಯೋಜಕರಾದ ಶಿವಾನಂದ ಹಳ್ಯಾಳ, ಇವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯ ಜಿ.ಎಲ್. ಸತ್ತೆನ್ನವರ ಅಧ್ಯಕ್ಷತೆ ವಹಿಸಿದ್ದರು.

ಬಿ.ಎಸ್. ಸಾತನ್ನವರ, ಎಂ.ಆರ್. ಹೊಳೆಣ್ಣವರ, ಭಾಸ್ಕರ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.
ಪ್ರೊ. ಎಂ.ಬಿ. ಕಂಬಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗಳಗಿ ಹಾಗೂ ಆಶಾ ಸ್ವಾಗತ ಗೀತೆ ಹಾಡಿದರು. ಮಂಜುನಾಥ ಡೊಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net