ಓಂ ಬೀಚ್ ಸಮುದ್ರದಲ್ಲಿ ಮುಳುಗಿ ಸಾವು

Crime Logo
Published on

ಗೋಕರ್ಣ: ಇಲ್ಲಿನ ಓಂಬೀಚ್ ಸಮುದ್ರ ದಂಡೆ ಮೇಲೆ ನಿಂತು ವೀಕ್ಷಿಸುತ್ತಿದ್ದಾಗ ಅಪ್ಪಳಿಸಿದ ಭಾರೀ ಅಲೆಗೆ ಆಯತಪ್ಪಿ ಬಿದ್ದು ಪ್ರವಾಸಿಗನೊಬ್ಬ ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ. ಶಿವಮೊಗ್ಗ ಅಶೋಕನಗರದ ಅಸ್ಲಂ ಸಯ್ಯದ್ ಪೀರ್ (44) ಸಾವನ್ನಪ್ಪಿದ್ದಾರೆ. ಒಂಬತ್ತು ಜನ ಗೆಳೆಯರೊಂದಿಗೆ ಬಂದಿದ್ದ ಅವರ ಸಾವಿನ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸ್ಥಳದಲ್ಲಿದ್ದ ಇಲ್ಲಿನ ಪೊಲೀಸರು, ಕರಾವಳಿ ಕಾವಲು ಪೊಲೀಸರು, ಲೈಫ್​ಗಾರ್ಡ್​ಗಳು ಮತ್ತು ಟೂರಿಸ್ಟ್ ಬೋಟ್ ಸಹಾಯದಿಂದ ಅವರನ್ನು ನೀರಿನಿಂದ ದಡಕ್ಕೆ ತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net