ಒಲಿಂಪಿಕ್ಸ್ ಮಾದರಿ ನಿರ್ಮಾಣ ಅಗತ್ಯ

tanisa
Published on

ಮೈಸೂರು: ನಗರದಲ್ಲಿ ಮುಖ್ಯವಾಗಿ ಬಾಹುಸಾರ್ ಈಜುಕೊಳದ ಸ್ಥಳದಲ್ಲಿ ಮತ್ತೆ ಈಜುಕೊಳ ನಿರ್ಮಾಣ ಮಾಡಬೇಕು ಎಂದು ನಿವೃತ್ತ ಈಜು ತರಬೇತುದಾರ ನಾಭಿರಾಜ್ ಒತ್ತಾಯಿಸಿದ್ದಾರೆ.

ಸರಸ್ವತಿಪುರಂನಲ್ಲಿರುವ ಮೈಸೂರು ವಿವಿ ಈಜುಕೊಳ, ಚಾಮುಂಡಿ ವಿಹಾರ ಕ್ರೀಡಾಂಗಣ ಆವರಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಈಜುಕೊಳ ಮಾತ್ರ ದೊಡ್ಡ ಕೊಳವಾಗಿವೆ.

ಆದರೆ, ಸದ್ಯ ಮೈಸೂರಿನ ಜನಸಂಖ್ಯೆ ಹಾಗೂ ಇಲ್ಲಿನ ಪ್ರತಿಭೆಗಳಿಗೆ ಅನುಗುಣವಾಗಿ ಈಜುಕೊಳಗಳ ಕೊರತೆ ಇದೆ. ನಗರದಲ್ಲಿ ಒಲಿಂಪಿಕ್ಸ್ ಮಾದರಿಯ ನಾಲ್ಕು ಈಜುಕೊಳಗಳು ನಿರ್ಮಾಣವಾಗಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net