ಒಲಂಪಿಯಾ ಥಿಯೇಟರ್ ಗೋಡೆ ಕುಸಿತ: ನಾಲ್ವರಿಗೆ ಗಾಯ

17
Published on


ಮೈಸೂರು:
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಒಲಂಪಿಯಾ ಥಿಯೇಟರ್‌ನ ಹಿಂಭಾಗದ ಗೋಡೆ ಕುಸಿದು ಬಿದ್ದ ಪರಿಣಾಮ ಮಣ್ಣಿನಡಿ ಸಿಲುಕಿ ಒಂದೂವರೆ ಆಣೆ ಗಲ್ಲಿಯ ಮೂವರು ಬಟ್ಟೆ ವ್ಯಾಪಾರಿಗಳು ಸೇರಿ ನಾಲ್ವರು ಗಾಯಗೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ 1 ಗಂಟೆಯಲ್ಲಿ ಗೋಡೆ ಕುಸಿದಿದ್ದು, ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದ ಯರಗನಹಳ್ಳಿ ಸತೀಶ್(50), ರಾಜೀವ್‌ನಗರದ ಹರ್ಮನ್(19), ತಬ್ರೇಜ್(40) ಹಾಗೂ ಶಾಕೀಬ್ ಗಾಯಗೊಂಡರು. ಗಾಯಾಳುಗಳು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಹರ್ಮನ್ ಮತ್ತು ತಬ್ರೇಜ್ ಅವರ ಕೈ ಮತ್ತು ಕಾಲಿಗೆ ಪೆಟ್ಟಾಗಿದ್ದು, ಮೂಳೆ ಮುರಿದಿದೆ. ಸದ್ಯ ಇಬ್ಬರಿಗೂ ಚಿಕಿತ್ಸೆ ಮುಂದುವರಿದಿದೆ. ಸತೀಶ್ ಅವರ ಬೆನ್ನಿನ ಭಾಗದಲ್ಲಿ ಗಾಯವಾಗಿದೆ. ಇನ್ನು ಶಾಕೀಬ್‌ಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net