ಮತದಾನಕ್ಕು ಮುನ್ನ ಪ್ರಾಣ ಬಿಟ್ಟ ವೃದ್ಧೆ

old women dies befor voting in Koppal
ಪಾರ್ವತಮ್ಮ
Published on

ಕೊಪ್ಪಳ: 85 ವರ್ಷ ಮೇಲ್ಪಟ್ಟ ಮತದಾರರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶವಿದೆ. ಕೊಪ್ಪಳದಲ್ಲಿ ಅಜ್ಜಿಯೊಬ್ಬರು ಮತದಾನ ಮಾಡುವ ಮುಂಚೆಯೇ ಪ್ರಾಣ ಬಿಟ್ಟಿದ್ದಾರೆ.

ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ಪಾರ್ವತಮ್ಮ ದೊಡ್ಡ ಬಸಪ್ಪ ಸಜ್ಜನ (95) ಮೃತ ವೃದ್ಧೆ. ಅಜ್ಜಿ ಮನೆಯಿಂದಲೇ ಮತದಾನ ಮಾಡಲು ನೋಂದಾಯಿಸಿಕೊAಡಿದ್ದರು. ಅದರಂತೆ ಚುನಾವಣಾ ಅಧಿಕಾರಿಗಳು ಗುರುವಾರ ಮತದಾನ ಮಾಡಿಸಿಕೊಳ್ಳಲು ಮನೆಗೆ ಆಗಮಿಸಿದ್ದರು. ಅಷ್ಟರಲ್ಲಿ ಪಾರ್ವತಮ್ಮ ನಿಧನರಾಗಿದ್ದರು. ಬಳಿಕ ಅಧಿಕಾರಿಗಳು ಕುಟುಂಬದವರಿಗೆ ಸಾಂತ್ವಾನ ಹೇಳಿ ಇತರ ವೃದ್ಧರ ಮನೆಗೆ ತೆರಳಿ ಮತದಾನ ಪ್ರಕ್ರಿಯೆ ಮುಂದುವರೆಸಿದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅಜ್ಜಿ ಮತದಾನಕ್ಕು ಮುನ್ನವೇ ಜೀವ ಬಿಟ್ಟಿದ್ದಾಳೆ. ಸಹಾಯಕ ಚುನಾವಣಾ ಅಧಿಕಾರಿ, ತಾಪಂ ಇಒ ದುಂಡಪ್ಪ ತುರಾದಿ, ಗ್ರಾಪಂ ಪಿಡಿಒ ಅಶೋಕ ರಾಂಪೂರ ಇತರರು ಸಾಂತ್ವಾನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net