ನೀರು ಕುಡಿಯಲು ಹೋದ ವೃದ್ಧೆ ಹೊಂಡದಲ್ಲಿ ಬಿದ್ದು ಸಾವು

Crime Logo
Published on

ಬ್ಯಾಡಗಿ: ನೀರು ಕುಡಿಯಲು ಹೋದ ವೃದ್ಧೆಯೊಬ್ಬರು ಹೊಂಡದಲ್ಲಿ ಬಿದ್ದು ಮೃತಪಟ್ಟ ಘಟನೆ ಪಟ್ಟಣದ ಹೊಂಡದ ಓಣಿಯಲ್ಲಿ ನಡೆದಿದೆ.
ಹೊಳಬಸಮ್ಮ ಬಸವಂತಪ್ಪ ಕನ್ನಪ್ಪನವರ (76) ಮೃತ ವೃದ್ಧೆ.
ಇವರು ನೀರು ಕುಡಿಯುವ ಸಲುವಾಗಿ ಹೊಂಡಕ್ಕೆ ಹೋದಾಗ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಈ ಕುರಿತು ಬ್ಯಾಡಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net