ಕಾರು ಬೈಕ್‌ಗೆ ಗುದ್ದಿ ವೃದ್ಧೆ ಸ್ಥಳದಲ್ಲೇ ಸಾವು

KDR acc
ಹೇಮಗಿರಿ ಲಿಂಗ್ಲಾಪುರ ಗೇಟ್ ಬಳಿ ನಡೆದ ಅಪಘಾತದಲ್ಲಿ ಕಾರಿನ ಮುಂಭಾಗದಲ್ಲಿ ಬೈಕ್ ಸಿಲುಕಿಕೊಂಡಿರುವುದು.
Published on

ಕಡೂರು: ಹೇಮಗಿರಿ ಲಿಂಗ್ಲಾಪುರ ಗೇಟ್‌ಬಳಿ ಬೈಕ್ ಹಿಂಬದಿಗೆ ಕಾರು ಗುದ್ದಿ ವೃದ್ಧೆ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಸವಾರನ ತಲೆಗೆ ಬಲವಾದ ಏಟು ಬಿದ್ದಿದೆ.

ಅರಸೀಕೆರೆ ತಾಲೂಕಿನ ಮಾವುತನಹಳ್ಳಿ ಕಲ್ಲಮ್ಮ (60) ಮೃತ ದುರ್ದೈವಿ. ಮೃತಳ ಸಂಬಂಧಿಕ, ಬೈಕಿನ ಸವಾರ ಚಂದ್ರಶೇಖರ್ ಎಂಬುವರ ತಲೆಗೆ ಗಂಭೀರವಾದ ಪೆಟ್ಟು ಬಿದ್ದು ಪ್ರಜ್ಞೆ ತಪ್ಪಿದ್ದು, ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.
ಕಡೂರು ಮಾರ್ಗದಿಂದ ಊರಿಗೆ ಬೈಕ್‌ನಲ್ಲಿ ಹೋಗುತ್ತಿರುವಾಗ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಬೈಕ್ ಹಿಂಬದಿ ಕುಳಿತಿದ್ದ ಕಲ್ಲಮ್ಮ ತಲೆಗೆ ತೀವ್ರತರ ಪೆಟ್ಟುಬಿದ್ದಿದ್ದರಿಂದ ಸ್ಥಳದಲ್ಲೇ ಮೃತಪಟ್ಟರು. ಅಪಘಾತದ ರಭಸಕ್ಕೆ ಕಾರಿನ ಮುಂಭಾಗದೊಳಗೆ ಬೈಕ್ ಸಿಲುಕಿಕೊಂಡಿತ್ತು. ಕಾರು ರಾಜಕೀಯ ಮುಖಂಡರೊಬ್ಬರದ್ದಾಗಿದೆ ಎಂದು ತಿಳಿದುಬಂದಿದೆ. ಕಾರನ್ನು ಚಾಲಕ ಬಿಟ್ಟು ಪರಾರಿಯಾಗಿದ್ದಾನೆ.
ಪಿಎಸ್‌ಐ ಧನಂಜಯ್ ಸ್ಥಳಕ್ಕೆ ಭೇಟಿ ನೀಡಿದ್ದರು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net