ಕ್ಷುಲಕ ಕಾರಣಕ್ಕೆ ಜಗಳ: ಆನೆಕೆರೆ ಬೀದಿಯಲ್ಲಿ ವೃದ್ಧೆ ಕೊಲೆ

Crime Logo
Published on

ಮಂಡ್ಯ: ನಗರದ ಆನೆಕೆರೆ ಬೀದಿಯಲ್ಲಿ ವ್ಯಕ್ತಿಯೊಬ್ಬ ಚಾಕುವಿನಿಂದ ಕುತ್ತಿಗೆ ಕುಯ್ದು ವೃದ್ಧೆಯನ್ನು ಕೊಲೆ ಪೊಲೀಸರಿಗೆ ಶರಣಾಗಿದ್ದಾನೆ.

ಆನೆಕೆರೆ ಬೀದಿ ನಿವಾಸಿ ಕೆಂಪಮ್ಮ(70) ಮೃತೆ. ಈಕೆಯ ಸಂಬಂಧಿ ಹರೀಶ್(36) ಪೊಲೀಸರ ವಶದಲ್ಲಿದ್ದಾನೆ. ಈತ ಗೋವಾದಲ್ಲಿ ಕೆಲಸ ಮಾಡುತ್ತಿದ್ದನು. ನಾಲ್ಕೈದು ದಿನದ ಹಿಂದೆಯಷ್ಟೇ ಮಂಡ್ಯ ಬಂದಿದ್ದನು. ಈ ನಡುವೆ ಕೆಂಪಮ್ಮ ಜತೆ ಜಗಳವಾಡಿದ್ದು, ವಿಕೋಪಕ್ಕೆ ತಿರುಗಿ ಚಾಕುವಿನಿಂದ ಕುಯ್ದು ಕೊಲೆ ಮಾಡಿದ್ದಾನೆ. ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಮಂಡ್ಯ ಸೆಂಟ್ರಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಂತೆಯೇ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net