ಟವೆಲ್‌ನಿಂದ ಉಸಿರುಗಟ್ಟಿಸಿ ಕೊಲೆ: ಇತ್ತೀಚೆಗಷ್ಟೇ ವೃದ್ಧಾಶ್ರಮ ತೊರೆದು ಮನೆ ಸೇರಿದ್ದ ವೃದ್ಧೆ

Crime Logo
Published on

ಮಂಡ್ಯ: ನಗರದ ಹೊರವಲಯ ಹೆಬ್ಬಳ್ಳ ಸಮೀಪವಿರುವ ಚಿಕೋರಿ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಟವೆಲ್‌ನಿಂದ ಬಿಗಿದು ವೃದ್ಧೆಯನ್ನು ಕೊಲೆ ಮಾಡಲಾಗಿದೆ.

ನಗರದ ವಿದ್ಯಾನಗರದ ನಿವಾಸಿ, ಚಿಕೋರಿ ಕಾರ್ಖಾನೆಯ ಮಾಲೀಕ ರಮೇಶ್ ಅವರ ಪತ್ನಿ ನಳಿನಿ(62) ಮೃತೆ. ಕಾಫಿಪುಡಿ ಅಂಗಡಿ ಇಟ್ಟುಕೊಂಡಿದ್ದ ರಮೇಶ್ ಅವರು, ಉದ್ಯಮ ಮಾಡಲು ಮನೆ ಮತ್ತು ಚಿಕೋರಿ ಕಾರ್ಖಾನೆಯನ್ನು ಅಡವಿಟ್ಟು ಖಾಸಗಿ ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಆದರೆ ಸಾಲ ತೀರಿಸಲಾಗದ ಕಾರಣ ಬ್ಯಾಂಕ್‌ನವರು ಮನೆ ಮತ್ತು ಕಾರ್ಖಾನೆಯನ್ನು ಕೋರ್ಟ್ ಮೂಲಕ ತಮ್ಮ ಸುಪರ್ದಿಗೆ ಪಡೆದಿದ್ದರು.

ಇದರಿಂದಾಗಿ ದಂಪತಿ ಕೆಲ ದಿನ ಮಂಡ್ಯ ತೊರೆದು ಮೈಸೂರಿನ ವೃದ್ದಾಶ್ರಮ ಸೇರಿದ್ದರು. ಇತ್ತೀಚೆಗೆ ನಳಿನಿ ಅವರು ವೃದ್ದಾಶ್ರಮ ತೊರೆದು ತಮ್ಮ ಕಾರ್ಖಾನೆಯಲ್ಲಿದ್ದ ಮನೆಗೆ ಬಂದು ನೆಲೆಸಿದ್ದರು. ಆದರೆ, ಮಂಗಳವಾರ ರಾತ್ರಿ ದುಷ್ಕರ್ಮಿಗಳು ಟವೆಲ್‌ನಿಂದ ಬಿಗಿದು ಆಕೆಯನ್ನು ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಡಿವೈಎಸ್ಪಿ ಶಿವಮೂರ್ತಿ, ಗ್ರಾಮಾಂತರ ಠಾಣೆ ಸಿಪಿಐ ಶಿವಪ್ರಸಾದ್ ರಾವ್ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net