

ರಾಣೆಬೆನ್ನೂರ: ವೃದ್ದೆಯೊಬ್ಬರ ಚಿನ್ನದ ದೋಚಿದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಇಲ್ಲಿಯ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ನಗರದ ಕೋಟೆ ಓಣಿಯ ಸಂತೋಷ ತುಳಜಪ್ಪ ಸಿಂಧೆ (25) ಹಾಗೂ ಕೌಲಪೇಟೆ ನಿವಾಸಿ ದ್ಯಾಮಣ್ಣ ಪಾಂಡಪ್ಪ ನವಸಣ್ಣನವರ (49) ಬಂಧಿತ ಆರೋಪಿಗಳು. ಇವರಿಂದ 1.50 ಲಕ್ಷ ರೂ. ಮೌಲ್ಯದ 20 ಗ್ರಾಂ ತೂಕದ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಏ. 6ರಂದು ನಗರದ ಕೋಟೆ ಭಾಗದಲ್ಲಿ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುತ್ತಿದ್ದ ವೃದ್ದೆ ಸುಧಾಬಾಯಿ ಎಂಬುವರ ಕೊರಳಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕುರಿತು ಎಸ್ಪಿ ಮಾರ್ಗದರ್ಶನದಲ್ಲಿ ತಂಡ ರಚಿಸಿದ ಶಹರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಡಿವೈಎಸ್ಪಿ ಡಾ. ಗಿರೀಶ ಭೋಜಣ್ಣನವರ, ಸಿಪಿಐ ಡಾ. ಶಂಕರ, ಪಿಎಸ್ಐ ಎಚ್.ಎನ್. ದೊಡ್ಡಮನಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.