ರೈಲಿಗೆ ಹತ್ತುವಾಗ ಕೆಳಕ್ಕೆ ಬಿದ್ದು ಗಾಲಿಗೆ ಸಿಲುಕಿ ಸಾವಿಗೀಡಾದ ವೃದ್ಧೆ

death
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ರೈಲಿಗೆ ಹತ್ತಲು ಯತ್ನಿಸುವಾಗ ಆಯತಪ್ಪಿ ಕೆಳಕ್ಕೆ ಬಿದ್ದ ವೃದ್ಧೆಯೊಬ್ಬರು ಕೆಳಕ್ಕೆ ಬಿದ್ದು, ಅಡಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ದೊಡ್ಡಬಳ್ಳಾಪುರದ ರೈಲ್ವೇ ಸ್ಟೇಷನ್​ನಲ್ಲಿ ಈ ದುರಂತ ಸಂಭವಿಸಿದೆ. ವಯೋವೃದ್ಧೆಯೊಬ್ಬರು ರೈಲಿಗೆ ಹತ್ತುವಾಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ರೈಲು ಚಲಿಸಲಾರಂಭಿಸಿ ಆಕೆ ಕೆಳಕ್ಕೆ ಬಿದ್ದು ಗಾಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

ಸಾವಿಗೀಡಾದ ವೃದ್ಧೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಯಶವಂತಪುರ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಅಗತ್ಯ ಕ್ರಮಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net