ಮಳೆ ನೀರಲ್ಲಿ ಕೊಚ್ಚಿ ಹೋದ ವೃದ್ಧೆ; ಕಾಲುವೆಯಲ್ಲಿ ಬೈಕ್​ ಕೊಚ್ಚಿಕೊಂಡು ಹೋದರೂ ಪ್ರಾಣಾಪಾಯದಿಂದ ಪಾರಾದ ಸವಾರ

House
ಕೋಲಾರದ ಗದ್ದೆಕಣ್ಣೂರು ಗ್ರಾಮದಲ್ಲಿ ಮಳೆಯಿಂದಾಗಿ ನಾಗೇಶ್​ ಎಂಬವರ ಮನೆ ಕುಸಿದಿದೆ. ಅವರು, ಪತ್ನಿ ಹಾಗೂ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದಾರೆ.
Published on

ಕೋಲಾರ: ಜಿಲ್ಲೆಯಾದ್ಯಂತ ಭಾರಿ ಮಳೆಯಾಗಿದ್ದು, ಕಾಲುವೆಯೊಂದರಲ್ಲಿ ವೃದ್ಧೆಯೊಬ್ಬರ ಜೊತೆಗೆ ಬೈಕ್​ ಕೂಡ ಕೊಚ್ಚಿಕೊಂಡು ಹೋಗಿದ್ದರೆ, ಬೈಕ್​ ಚಲಾಯಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಎ. ಕೊತ್ತೂರು ಬಳಿ ಈ ಘಟನೆ ಸಂಭವಿಸಿದೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಸ್ವಗ್ರಾಮದ ಅಡ್ಡಗಲ್​ನ ಫಾರ್ಮ್ ಹೌಸ್ ಬಳಿ ಇರುವ ಬೃಹತ್ ಕಾಲುವೆಯಲ್ಲಿ ಈ ಅವಘಡ ಸಂಭವಿಸಿದೆ. ಮಳೆ ನೀರು ತುಂಬಿ ಹರಿಯುತ್ತಿದ್ದ ಈ ಕಾಲುವೆಯಲ್ಲಿ 65 ವರ್ಷದ ಅಮರಾವತಮ್ಮ ಎಂಬ ವೃದ್ಧೆ ಕೊಚ್ಚಿಕೊಂಡು ಹೋಗಿದ್ದಾರೆ.

ರಮೇಶ್ ಕುಮಾರ್ ಅವರ ಆಪ್ತ ರೆಡ್ಡಪ್ಪ ಎಂಬುವವರ ಪತ್ನಿ ಅಮರಾವತಮ್ಮ ಹಾಗೂ ಬಾಬು ಎಂಬವರು ಬೈಕ್​ನಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಅದೃಷ್ಟವಶಾತ್ ಬಾಬು ಮರದ ಕೊಂಬೆ ರಕ್ಷಣೆ ಪಡೆದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net