ಮುಳಬಾಗಿಲು: ರಾಷ್ಟ್ರೀಯ ಹೆದ್ದಾರಿ -75ರ ಕಾಮನೂರು ಗೇಟ್ ಬಳಿ ರಸ್ತೆ ದಾಟುತ್ತಿದ್ದಾಗ ಕಂಟೇನರ್ ಲಾರಿ ಡಿಕ್ಕಿಯಾಗಿ ವೃದ್ಧೆ ಮೃತಪಟ್ಟಿದ್ದಾರೆ.ತಾಲೂಕಿನ ಚಿಕ್ಕನಹಳ್ಳಿಯ ನಾರಾಯಣಮ್ಮ (85) ಮೃತೆ. ಚಿಕ್ಕನಹಳ್ಳಿಯಿಂದ ಕೋಲಾರ ತಾಲೂಕಿನ ಅಜ್ಜಪ್ಪನಳ್ಳಿಯಲ್ಲಿ ಇರುವ ಮೊಮ್ಮಗಳನ್ನು ನೋಡಿಕೊಂಡು ಬರಲು ಹೋಗಿದ್ದರು. ಅಜ್ಜಪ್ಪನಹಳ್ಳಿ ಬದಲು ಕಾಮನೂರು ಗೇಟ್ ಬಳಿ ಬಸ್ ಇಳಿದು ಗಾಬರಿಯಿಂದ ರಸ್ತೆ ದಾಟುತ್ತಿದ್ದಾಗ ಅಪಘಾತ ಸಂಭವಿಸಿದೆ. ಈ ಬಗ್ಗೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮುಳಬಾಗಿಲು ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದ್ದು, ಬುಧವಾರ ಮರಣೋತ್ತರ ಪರೀಕ್ಷೆ ನಂತರ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.