ನಾಗರಹಾವಿನ ಕಡಿತಕ್ಕೆ ವೃದ್ಧೆ ಬಲಿ

devamma
ದೇವಮ್ಮ
Published on

ಸುಬ್ರಹ್ಮಣ್ಯ: ನಾಗರಹಾವು ಕಡಿದು ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಹರಿಹರ ಪಲ್ಲತ್ತಡ್ಕದ ಕಲ್ಲೇಮಠದಲ್ಲಿ ಭಾನುವಾರ ನಡೆದಿದೆ. ಕಲ್ಲೇಮಠ ನಿವಾಸಿ ದೇವಮ್ಮ(67) ಎಂಬವರು ತಮ್ಮ ಮನೆ ಸಮೀಪದ ಕೊಟ್ಟಿಗೆಯ ಸುತ್ತ ಸ್ವಚ್ಛಗೊಳಿಸುವ ವೇಳೆ ಕಾವು ಕೊಡಲು ಕುಳಿತಿದ್ದ ಕೋಳಿಯನ್ನು ನೋಡುತ್ತಿದ್ದಾಗ ನಾಗರಹಾವು ಕಚ್ಚಿತು. ತಕ್ಷಣವೇ ಅವರಿಗೆ ಹಳ್ಳಿಮದ್ದು ಕೊಡಿಸಿ ಅಲ್ಲಿಂದ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಲಾಯಿತು. ಆದರೆ ದಾರಿಮಧ್ಯೆ ಕೊನೆಯುಸಿರೆಳೆದರು. ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net