70ರ ದಶಕದ ಟಿವಿ ಮಾರಾಟ ಮಾಡಿದರೆ ಕುಬೇರ!

25-klr-19
Published on

ಕೋಲಾರ: ಎಪ್ಪತ್ತರ ದಶಕದ ಕಪ್ಪು ಬಿಳುಪು ಟಿವಿ, ರೇಡಿಯೊ, ಟೇಪ್ ರೆಕಾರ್ಡರ್‌ಗಳನ್ನು ಮಾರಿದರೆ ಲಕ್ಷ ಲಕ್ಷ ಹಣ ಸಿಗುತ್ತದೆ ಎಂದು ಅನಾಮಿಕನೊಬ್ಬ ಸಾವಾಜಿಕ ಜಾಲತಾಣದಲ್ಲಿ ಹರಡಿರುವ ವದಂತಿ ಜನರಲ್ಲಿ ಕುತೂಹಲ ಮೂಡಿಸಿದೆ.

ಇವುಗಳಲ್ಲಿ ಅಳವಡಿಸಿರುವ ಕೆಂಪು ಬಣ್ಣದ ಮರ್ಕ್ಯುರಿ (ಪಾದರಸ) ಬಲ್ಬ್ ಕೋಟಿ ರೂ. ಬೆಲೆ ಬಾಳುತ್ತದೆ, ಒಂದು ವೇಳೆ ಯಾರ ಬಳಿಯಾದರೂ ಇದ್ದಲ್ಲಿ ಅದೃಷ್ಟ ಲಕ್ಷ್ಮೀ ನಿಮ್ಮ ಮನೆಗೆ ಒಲಿದು ಬರುತ್ತಾಳೆಂದು ಜನರನ್ನು ನಂಬಿಸಲು ಯತ್ನಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ವಿಷಯ ತಿಳಿದ ಕೆಲವರು ಕಪ್ಪು ಬಿಳುಪು ಟಿವಿ, ಟೇಪ್ ರಿಕಾರ್ಡರ್ ಹಿಂದೆ ಬಿದ್ದಿದ್ದಾರೆ ಎನ್ನಲಾಗಿದೆ.

ಹೈದರಾಬಾದ್ ಇನ್ನಿತರ ಕಡೆಗಳಿಂದ ವ್ಯಾಪಾರಿಗಳು ಬಂದು ಲಕ್ಷ ಲಕ್ಷ ಹಣ ನೀಡಿ ಹಳೇ ವಸ್ತು ಖರೀದಿಸುತ್ತಾರೆ, ಒಂದು ವೇಳೆ ಡೋರ್ ಇರುವ ಹಳೇ ಟಿವಿ ಚೆನ್ನಾಗಿದ್ದಲ್ಲಿ ಹೆಚ್ಚು ಹಣ ನೀಡಿ ಕೊಳ್ಳಲಿದ್ದಾರೆಂದು ವದಂತಿ ಹಬ್ಬಿದೆ.

ಮರ್ಕ್ಯುರಿ ಬಲ್ಬ್ ಸಂಗ್ರಹಿಸಿ ಅಣು ವಸ್ತು ತಯಾರಿಸುವ ವ್ಯಾಪಾರಿಗಳಿಗೆ ಮಾರಾಟ ವಾಡಿದಲ್ಲಿ ಕಣ್ಣು ಮುಚ್ಚಿ ಕಣ್ಣು ತೆರೆಯುವುದಲ್ಲಿ ಕುಬೇರರಾಗಬಹುದು ಎಂದು ವಾಹಿತಿ ಹಬ್ಬಿಸಲಾಗಿದೆ, ಹಾಗಾಗಿ ಅನೇಕರು ಹಳ್ಳಿಗಳಿಗೆ ತೆರಳಿ ಹಳೇ ಟಿವಿ ರಿಪೇರಿ ವಾಡುವವರಿಗಾಗಿ ಶೋಧನೆ ನಡೆಸಿದ್ದಾರೆನ್ನಲಾಗಿದೆ. ಪೊಲೀಸರು ಮೋಸಗಾರರನ್ನು ಪತ್ತೆ ವಾಡಿ ಜನರನ್ನು ಕಾಪಾಡಬೇಕೆಂದು ಪ್ರಜ್ಞಾವಂತರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net