

ಚಿಟಗುಪ್ಪ: ಬನ್ನಳ್ಳಿ ಗ್ರಾಮದ ಪುರಾತನ ಮತ್ತು ಅವಸಾನದ ಅಂಚಿನಲ್ಲಿರುವ ಶಿವಲಿಂಗ (ರಾಮಲಿಂಗ) ಮಂದಿರದ ಜೀರ್ಣೋದ್ಧಾರದ ಹಿನ್ನೆಲೆಯಲ್ಲಿ ಸೋಮವಾರ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಪುರಾತತ್ವ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ತೋಟವೊಂದರಲ್ಲಿ ಪ್ರಾಚೀನ ರಾಮಲಿಂಗ ಮಂದಿರವಿದ್ದು, ನಿತ್ಯ ಪೂಜೆ ನಡೆಯುತ್ತದೆ. ಮಂದಿರ ನಿರ್ಮಾಣದ ಕಾಲದ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಶಾಸಕ ಬೆಲ್ದಾಳೆ ಅಧಿಕಾರಿಗಳನ್ನು ಕರೆಸಿ ಗ್ರಾಮಸ್ಥರ ಸಮ್ಮುಖ ಪರಿಶೀಲನೆ ನಡೆಸಿದರು.
ಹಂಪಿಯ ಪುರಾತತ್ವ ಇಲಾಖೆ ಅಧೀಕ್ಷಕ ಡಾ.ನಿಹೇಲ್ ದಾಸ್, ಅಧೀಕ್ಷಕ ಅಭಿಯಂತರ ಬರಣಿ ಧರನ್, ಬೀದರ್ ಉಪವಲಯ ಸಹಾಯಕ ಸಂರಂಣಾಧಿಕಾರಿ ಅನಿರುದ್ಧ ದೇಸಾಯಿ, ಕಿರಣಬಾಬು ಅವರ ತಂಡ ಮಂದಿರದಲ್ಲಿನ ಲಿಂಗ, ವಿವಿಧ ಮೂರ್ತಿ, ಶಿಲೆ, ಶಿಲಾಶಾಸನ, ಲಿಪಿಗಳ ಸಮಗ್ರ ಪರಿಶೀಲನೆ ನಡೆಸಿತು.
ಪ್ರಮುಖರಾದ ಶಂಕರರಾವ ಪಾಟೀಲ್, ಹಣಮಂತರಾವ ಪಾಟೀಲ್, ವೆಂಕಟರೆಡ್ಡಿ ಶೇರಿಕಾರ, ಅಜೀತ್ ಪಾಟೀಲ್, ಮಂಜುನಾಥ ಸಲಗರ, ರಾಜರೆಡ್ಡಿ ಚಾವ್ಲಾ, ಶಿವಾನಂದ ಪಾಟೀಲ್, ಭಣಪ್ಪ ಜಮಾದಾರ, ಬಲವಂತ ರೆಡ್ಡಿ ಇತರರಿದ್ದರು.