ಐತಿಹಾಸಿಕ ಸಬ್​ ಜೈಲ್​ ಉಳಿಸಲು ಪ್ರಯತ್ನ: ರಾಯಪ್ಪ

udp-9-subjail
Published on

ಉಡುಪಿ: ಐತಿಹಾಸಿಕ ಸಬ್​ ಜೈಲ್​ ಇರುವ ಪ್ರದೇಶದಲ್ಲಿ ಹೊಸ ನಗರಸಭೆ ಕಚೇರಿ ನಿರ್ಮಾಣವಾಗುತ್ತಿದ್ದು, ಹಳೆಯ ಸಬ್​ ಜೈಲ್​ನ ಒಂದಿಷ್ಟು ಪ್ರಮುಖ ಭಾಗವನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ಹೇಳಿದರು.

ಶನಿವಾರ ಸಿಟಿ ಬಸ್​ ಸ್ಟಾ$ಂಡ್​ ಬಳಿಯಿರುವ ಚಿತ್ರಕಲಾ ಮಂದಿರ ಕಲಾಶಾಲೆಯ ಜಂಗಮ ಮಠದ ವಿಭೂತಿ ಆರ್ಟ್​ ಗ್ಯಾಲರಿಯಲ್ಲಿ ನಗರದ ಹೃದಯ ಭಾಗದಲ್ಲಿರುವ ಶತಮಾನಗಳ ಇತಿಹಾಸ ಹೊಂದಿರುವ ಸ್ಮಾರಕ ಸಬ್​ ಜೈಲ್​ ವಾಸ್ತುಶಿಲ್ಪದ ದಾಖಲಾತಿ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಹೊಸ ನಗರಸಭೆ ಕಚೇರಿ ನಿರ್ಮಾಣವು ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯವಾಗಿದೆ. ಹಾಗೇ ಪುರತಾನ ಕಟ್ಟಡಗಳನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿ. ಪುರಾತನ ವೈಶಿಷ್ಟತೆಗೆ ದಕ್ಕೆ ಭಾರದಂತೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ಚಿತ್ರಕಲಾ ಮಂದಿರ ಕಲಾಶಾಲೆ ನಿರ್ದೇಶಕ ಡಾ. ಯು.ಸಿ ನಿರಂಜನ್​ ಮುಖ್ಯ ಅತಿಥಿಗಳಾಗಿದ್ದರು. ಇಂಟ್ಯಾಕ್​ ಮಂಗಳೂರು ವಿಭಾಗದ ಕನ್ವೀನಿಯರ್​ ಆರ್ಕಿಟೆಕ್ಟ್​ ಸುಭಾಷ್​ಚಂದ್ರ ಬಸು ಹಾಗೂ ಸದಸ್ಯರಾದ ಕಲಾವಿದ ಡಾ. ಜನಾರ್ದನ ಹಾವಂಜೆ ಮತ್ತು ಆರ್ಕಿಟೆಕ್ಟ್​ ಶರ್ವಾಣಿ ಭಟ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net