

ಕಂಪ್ಲಿ: ಹಳೇ ವಿದ್ಯಾರ್ಥಿಗಳು ಕಲಿತ ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸಬೇಕು. ವಿದ್ಯಾಥಿ ದೆರ್ಸೆಯಲ್ಲಿ ಕಲಿತ ಸಂಸ್ಕಾರವನ್ನು ಜೀವನದುದ್ದಕ್ಕೂ ಪಾಲಿಸಬೇಕು ಎಂದು ಮುಖ್ಯಶಿಕ್ಷಕಿ ಎಚ್.ಶಕುಂತಲಾ ಹೇಳಿದರು.
ತಾಲೂಕಿನ ದೇವಸಮುದ್ರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2003-04ನೇ ಸಾಲಿನ ಹಳೇ ವಿದ್ಯಾರ್ಥಿಗಳ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಶೈಕ್ಷಣಿಕ ವಿಚಾರ ಸಂಕಿರಣ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಳೇ ವಿದ್ಯಾರ್ಥಿಗಳ ಸಂಘದ ಪ್ರಮುಖರಾದ ಮಂಜುನಾಥ, ರಾಜಶೇಖರ, ಸಂಗೀತಾ, ಭಾಗ್ಯ, ರವಿ ಮಣ್ಣೂರು ಮಾತನಾಡಿ, ಹತ್ತನೆ ತರಗತಿಯಲ್ಲಿ ಉತ್ತಮ ಅಂಕಗಳಿಸುವ ಬಗ್ಗೆ, ಉನ್ನತ ಶಿಕ್ಷಣ, ಹುದ್ದೆ ಗಳಿಸುವ ಕುರಿತು, ವಿದ್ಯಾರ್ಥಿ ಜೀವನದ ನಂತರ ಎದುರಾಗುವ ಸಮಸ್ಯೆ ಮತ್ತು ಪರಿಹಾರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಶಾಲಾ ಮಕ್ಕಳ ಬಿಸಿಯೂಟಕ್ಕೆ 350 ಸ್ಟೀಲ್ ತಟ್ಟೆ ಹಾಗೂ ಲೋಟಗಳನ್ನು ವಿತರಿಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಸಣ್ಣಲಿಂಗಪ್ಪ, ಶಿಕ್ಷಕರಾದ ಕೆ.ರಾಮಚಂದ್ರರಾವ್, ಮಲ್ಲಯ್ಯ ಮಠದ, ಬಸನಗೌಡ, ಯೋಗರಾಜ್, 2003ನೇ ಸಾಲಿನ ಮುಖ್ಯಶಿಕ್ಷಕ ಹೊನ್ನೂರಸ್ವಾಮಿ, ಶಿಕ್ಷಕರಾದ ಬಿ.ವೀರಣ್ಣ, ಈಶ್ವರ ನಾಯಕ, ಹನುಮಂತಪ್ಪ, ರಾಜಶೇಖರ, ವಿಶ್ವನಾಥ ಇತರರಿದ್ದರು.