ಹಳೇಯ ವಿದ್ಯಾರ್ಥಿಗಳು ಶಾಲೆಗೆ ದೇಣಿಗೆ ನೀಡಲಿ

6 SIRGUPPA 01
ಸಿರಗುಪ್ಪ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿ ಜಿ ಸುಧಾ ಅವರು ಶಾಲೆಗೆ ಕಾಲಿಂಗ್ ಬೆಲ್ ಮತ್ತು ಪ್ಲೇಟ್ ಸ್ಟ್ಯಾಂಡ್‌ನ್ನು ನೀಡಿದರು. ಶಾಲೆಯ ಹಳೆಯ ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ವಿಶಾಲಾಕ್ಷಿ, ಶಿಕ್ಷಕರಾದ ಆರ್ ಪದ್ಮನಾಭರಾವ್, ವೀಣಾ, ಶಾರದಾ ಇತರರಿದ್ದರು.
Published on

ಸಿರಗುಪ್ಪ: ಹಳೆಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಗೆ ಕೊಡುಗೆ ನೀಡಲು ಮುಂದೆ ಬರಬೇಕು ಎಂದು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ವೆಂಕಟೇಶ ಯಾದವ ಬುಧವಾರ ಹೇಳಿದರು.

ನಮ್ಮ ಶಾಲೆ-ನಮ್ಮ ಜವಾಬ್ದಾರಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ ಕುರಿತು ವಿನೂತನ ಯೋಜನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದೆ.

ಈ ಮೂಲಕ ಸರ್ಕಾರಿ ಪ್ರೌಢಶಾಲೆ ಬಾಲಕಿಯರ ಸಿರುಗುಪ್ಪ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಅವರಿಂದ ಶಾಲೆಯ ಅಭಿವೃದ್ಧಿಗೆ ಸಹಕಾರ ಪಡೆಯಲಾಗಿದೆ. ಶಾಲೆಯ ಹಳೇ ವಿದ್ಯಾರ್ಥಿಗಳ ಸಂಘದ ವಿದ್ಯಾರ್ಥಿನಿ ಜಿ.ಸುಧಾ ಶಾಲೆಗೆ 28,000 ಸಾವಿರ ರೂ. ಬೆಲೆಬಾಳುವ ಕಾಲಿಂಗ್ ಬೆಲ್ ಮತ್ತು ಪ್ಲೇಟ್ ಸ್ಟಾೃಂಡ್‌ಅನ್ನು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net